Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀಶೈಲಂ » ಆಕರ್ಷಣೆಗಳು » ಅಕ್ಕ ಮಹಾದೇವಿ ಗುಹೆಗಳು

ಅಕ್ಕ ಮಹಾದೇವಿ ಗುಹೆಗಳು, ಶ್ರೀಶೈಲಂ

3

ಅಕ್ಕ ಮಹಾದೇವಿ ಗುಹೆಗಳು ನಲ್ಲಮಲೈ ಬೆಟ್ಟಗಳ ಶ್ರೇಣಿಯಲ್ಲಿದೆ. ಇದು ಶ್ರೀ ಶೈಲಂ ನಿಂದ 10 ಕೀ.ಮಿ ಅಂತರದಲ್ಲಿದೆ. ಈ ಗುಹೆಗಳು ಇತಿಹಾಸಪೂರ್ವ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂಬ ನಂಬಿಕೆಗೆ ಸಾಕ್ಷ್ಯಾಧಾರಗಳಿವೆ. ಅದರಲ್ಲೂ, ಈ ಗುಹೆಗಳು ಶ್ರೀ ಶೈಲಂ ಪಟ್ಟಣದ ಇತಿಹಾಸದಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿವೆ.

ಈ ಗುಹೆಗೆ ಅಕ್ಕ ಮಹಾದೇವಿ ಎಂಬ ಹೆಸರು ಹೇಗೆ ಪ್ರಾಪ್ತವಾಯಿತೆಂದರೆ, 12  ನೇ ಶತಮಾನದಲ್ಲಿದ್ದ ಕರ್ನಾಟಕದ ಪ್ರಸಿದ್ಧ ದಾರ್ಶನಿಕೆ ಹಾಗೂ ಗೀತ ರಚನೆಗಾರ್ತಿಯಾದ ಮಹಾ ತಪಸ್ವಿ ಅಕ್ಕ ಮಹಾದೇವಿಯು ಈ ಗುಹೆಯಲ್ಲಿ ತಪಸ್ಸು ಮಾಡುತ್ತಿದ್ದಳು ಹಾಗೂ ಆಕೆಯ ಪ್ರಾರ್ಥನೆಯ ಮೇರೆಗೆ ಗುಹೆಯ ಆಳದಲ್ಲಿ ಶಿವಲುಂಗವು ತನ್ನಿಂದ ತಾನೆ ಉದ್ಭವವಾಗಿದೆ ಎಂದು ಐತಿಹಾಸಿಕ ಘಟನೆಗಳನ್ನು ವಿವರಿಸಲಾಗುತ್ತದೆ.

ಅಕ್ಕ ಮಹಾದೇವಿ ಗುಹೆಗಳು ನೈಸರ್ಗಿಕವಾಗಿ ರೂಪುಗೊಂಡ ಗುಹೆಗಳಲ್ಲಿ ಒಂದು. ಮತ್ತು  ಈ ಗುಹೆಗಳು ಕೃಷ್ಣ ನದಿಯ ಮುಖ್ಯವಾಹಿನಿಯ ಹತ್ತಿರದಲ್ಲಿ ಕಾಣಬಹುದು. ಮುಖ್ಯ ಗುಹೆಯು ನೈಸರ್ಗಿಕವಾಗಿ ರೂಪುಗೊಂಡ ಕಲ್ಲಿನ ಕಮಾನನ್ನು ಹೊಂದಿದ್ದು, ಇದನ್ನು ಒಂದು ಭೌಗೋಳಿಕ ವಿಸ್ಮಯವೆಂದೆ ಪರಿಗಣಿಸಲಾಗಿದೆ. ಈ ಕಮಾನು ಸುಮಾರು 200x16x4 ಫೀಟ್ ಅಳತೆಯನ್ನು ಹೊಂದಿದ್ದು  ಬೇರೆ ಯಾವುದೇ ರೀತಿಯ ಬೆಂಬಲವನ್ನೂ ಹೊಂದಿಲ್ಲ. ಗುಹೆಗಳ ಒಳಗಿನ ದೃಶ್ಯಗಳಿಗಿಂತ ಈ ಕಮಾನೇ ಹೆಚ್ಚು ಆಕರ್ಷಣೀಯವಾದ್ದರಿಂದ ಪ್ರವಾಸಿಗರು ಇದನ್ನೆ ಇಷ್ಟ ಪಡುತ್ತಾರೆ. ಗುಹೆಯ ಒಳಗಿನ ವಸ್ತುಗಳು ಆಕರ್ಷಕವಾಗಿದ್ದು ಇಲ್ಲಿನ ಬಂಡೆಗಳು ಭೂಮಿಯ ಮೇಲಿನ ಅತ್ಯಂತ ಹಳೆಯ ಜೀವನ ಪದ್ಧತಿಯನ್ನು ಸಾಬೀತು ಮಾಡುತ್ತದೆ.

ಕೃಷ್ಣಾ ನದಿಯ ಮೂಲಕ ಗುಹೆಗೆ ಪ್ರಯಾಣ ಮಾಡುತ್ತ ಅದರ ಅದ್ಭುತ ಅನುಭವವನ್ನು ಸ್ವತಃ ನಾವೇ ಪಡೆಯಬೇಕು. ಗುಹೆಯ ಒಳಗೆ 150 ಮೀಟರ್ ಆಳಕ್ಕೆ ಪ್ರಯಾಣಿಸಿದರೆ ಗೋಚರಿಸುವ ದೃಶ್ಯಗಳು ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ. ಐತಿಹಾಸಿಕ ವಿಷಯದಲ್ಲಿ ಆಸಕ್ತಿ ಇರುವವರು ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಲೇ ಬೇಕು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri