ಮಲ್ಲೆಲಾ ತೀರ್ಥಂ ಜಲಪಾತವು ಶ್ರೀ ಶೈಲಂ ನಿಂದ 50 ಕೀ.ಮಿ ದೂರದಲ್ಲಿ ಕಾಣಬಹುದು. ಈ ಜಲಪಾತವು ಧಾರ್ಮಿಕ ಜನಪ್ರಿಯತೆಯನ್ನು ಹೊಂದಿದ್ದು ಪ್ರತಿ ವರ್ಷ ಸಹಸ್ರಾರು ಭಕ್ತಾದಿಗಳು ಬರುತ್ತಾರೆ. ಜಲಪಾತಗಳು ಒಂದು ದಟ್ಟವಾದ ಕಾಡಿನ ಮಧ್ಯವಿದೆ. ಆದರೆ ಉಬ್ಬುತಗ್ಗಾಗಿರುವ ರಸ್ತೆಯ ಮೂಲಕ ಸುಲಭವಾಗಿ ಸಾಗಬಹುದು. ಆದರೆ ಮಳೆಗಾಲದಲ್ಲಿ ರಸ್ತೆಯಲ್ಲಿ ಮೋಟಾರು ವಾಹನಗಳು ಸಂಚರಿಸಲು ಸಾಧ್ಯವಿಲ್ಲ.
ಈ ಜಲಪಾತವು ಹಿಂದೂ ಭಕ್ತಾದಿಗಳ ದೃಷ್ಟಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದ್ದು, ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಪಾಪವು ತೊಳೆದುಹೋಗುವುದು ಹಾಗೂ ಮೋಕ್ಷದ ದಾರಿಯೂ ಸುಲಭವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಜಲಪಾತದಿಂದ ಹರಿಯುವ ನೀರು ಮಾಂತ್ರಿಕ ಶಕ್ತಿಯನ್ನು ಹೊಂದಿದ್ದು ಈ ನೀರು ಮೈ ಸೋಕಿದರೆ ಯಾವುದೇ ರೋಗಗಳಿದ್ದರೆ ಅದರಲ್ಲೂ ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳು ಹಾಗೂ ಮೂಳೆಗಳ ತೊಂದರೆಗಳೂ ಇದ್ದರೆ ಅವೂ ಕೂಡಾ ದೂರವಾಗುತ್ತವೆ ಎಂಬ ಪ್ರತೀತಿಯೂ ಇದೆ. ಆದ್ದರಿಂದ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯೂ ಅಪಾರ.
ಜಲಪಾತದವನ್ನು ತಲುಪಲು ಕಣಿವೆಯ ಕೆಳಗೆ 250 ಮೆಟ್ಟಿಲುಗಳಿದ್ದು ಕೆಳಗೆ ಇಳಿಯುವಾಗ ಜಾರುವ ಸಂಭವವಿರುವುದರಿಂದ ಸ್ವಲ್ಪ ಜಾಗ್ರತೆಯಿಂದಿರಬೇಕು. ಯಾವುದೇ ಕಾರಣಕ್ಕೂ ಆತುರದಿಂದ ಮೆಟ್ಟಿಲುಗಳನ್ನಿಳಿಯುವುದು ಅಪಾಯ ಆದ್ದರಿಂದ ಮಕ್ಕಳನ್ನು ಕರೆದು ಕೊಂಡು ಹೋಗುವಾಗ ಹೆಚ್ಚು ಗಮನವಹಿಸಿ.