ಭುವನಗಿರಿ ಕೋಟೆಯನ್ನು ಚಾಲುಕ್ಯ ಅರಸನಾದ ತಿರುವನಮಲ್ಲ ವಿಕ್ರಮಾದಿತ್ಯ ಕಟ್ಟಿಸಿದನು. 12 ನೆಯ ಶತಮಾನದಲ್ಲಿ ಕೋಟೆಯನ್ನು ಕಟ್ಟಲಾಗಿದ್ದು ರಾಜ್ಯಕ್ಕೆ ರಕ್ಷಣೆ ನೀಡುವ ಉದ್ದೇಶದಿಂದ ಕಟ್ಟಲಾಗಿತ್ತು.
ಬೆಟ್ಟದ ತುದಿಯಲ್ಲಿ 40 ಎಕರೆ ಜಾಗದಲ್ಲಿ ವಿಶಾಲವಾಗಿ ಕೋಟೆಯನ್ನು ಕಟ್ಟಲಾಗಿದೆ. ನೆಲದ ಮಟ್ಟದಿಂದ ಸುಮಾರು 500 ಮೀಟರ್ ಎತ್ತರವಿದೆ. ಈ ಕೋಟೆಯ ವಿಶೇಷವಾದ ವಸ್ತುಶಿಲ್ಪ ಮತ್ತು ಅನನ್ಯವಾದ ರಚನೆಯ ಕಾರಣದಿಂದ ಕೋಟೆ ಪ್ರವಾಸಿಗಳ ಮೆಚ್ಚಿನ ತಾಣವಾಗಿದೆ.
ಈ ಕೋಟೆ ಅಂಡಾಕಾರದಲ್ಲಿದ್ದು ಇದನ್ನು ಎರಡು ದ್ವಾರಗಳ ಮೂಲಕ ಪ್ರವೇಶಿಸಬಹುದಾಗಿದೆ. ಕೋಟೆಯ ಹೊರಗೆ ಆಳವಾದ ಕಂದಕವನ್ನು ನಿರ್ಮಿಸಿ ಕೋಟೆಯನ್ನು ತಲುಪುವುದು ಬಹಳ ಕಷ್ಟವಾಗಿಸಲಾಗಿದೆ. ಕೋಟೆಯೊಳಗೆ ಗುಪ್ತ ಸುರಂಗ ಮಾರ್ಗಗಳು, ಆಯುಧಗಳನ್ನು ಇಡುವ ಗುಪ್ತ ಕೋಣೆ ಇದೆ. ಮೇಲ್ಭಾಗದ ಕೋಟೆ ಎರಡು ಕಂದಕಗಳನ್ನು ಹೊಂದಿದ್ದು ನೀರನ್ನು ಸಂಗ್ರಹಿಸಿಡಲು ಬಳಸಲಾಗುತ್ತಿತ್ತು. ಕೋಟೆಯನ್ನು ಮೆಟ್ಟಿಲುಗಳು ಅಥವಾ ಸುತ್ತುಬಳಸಿ ಹೋಗಬಹುದಾಗಿದೆ.