Search
  • Follow NativePlanet
Share
ಮುಖಪುಟ » ಸ್ಥಳಗಳು » ನಲ್ಗೊಂಡ » ಹವಾಮಾನ

ನಲ್ಗೊಂಡ ಹವಾಮಾನ

ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ನಲ್ಗೊಂಡವನ್ನು ನೋಡಬಯಸುವವರಿಗಾಗಿ ಸೂಕ್ತವಾದ ಅವಧಿ. ಈ ಅವಧಿಯಲ್ಲಿ ಆಹ್ಲಾದಕರ ಹವಾಮಾನವಿದ್ದು ಉಷ್ಣತೆಯೂ ಸಹಿಸಿಕೊಳ್ಳಬಹುದಾದ ಮಟ್ಟದಲ್ಲಿರುತ್ತದೆ.  ಮುದ ನೀಡುವ ಗಾಳಿಯಲ್ಲಿನ ಸುತ್ತಾಟ ಹಾಗು ಪ್ರಯಾಣವು ಹಿತಕರವಾದ ಅನುಭವವನ್ನು ಒದಗಿಸುತ್ತವೆ ಜೊತೆಗೆ ಉಣ್ಣೆಯ ಬಟ್ಟೆಗಳಿರುವುದು ಅವಶ್ಯಕ.

ಬೇಸಿಗೆಗಾಲ

ಮಾರ್ಚ್ ತಿಂಗಳಲ್ಲಿ ಆರಂಭವಾಗುವ ಬೇಸಿಗೆ ಜೂನ್ ತನಕ ಇರುತ್ತದೆ. ಇದರಲ್ಲೂ ಏಪ್ರಿಲ್ ಮತ್ತು ಮೇ ತಿಂಗಳುಗಳು ವರ್ಷದ ಅತ್ಯಂತ ಬಿಸಿಯಾದ ತಿಂಗಳುಗಳುಗಳಾಗಿವೆ. ಜೂನ್ ಕೊನೆಗೆ ಮಳೆಗಾಲ ಆರಂಭವಾಗುತ್ತದೆ. ಬೇಸಿಗೆ ಬಹಳ ಬಿಸಿಯಾಗಿದ್ದು, ಶುಷ್ಕವೂ ಆಗಿರುತ್ತವೆ. ಇಲ್ಲಿನ ಉಷ್ಣತೆ 45 ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ಉಷ್ಣತೆ 35 ಡಿಗ್ರಿಗಳಷ್ಟಿದ್ದು ಆರ್ದ್ರತೆ ಹೆಚ್ಚಿರುತ್ತದೆ. ಜೂನ್ ಅಂತ್ಯದ ವೇಳೆಗೆ ಮಳೆಗಾಲ ಆರಂಭವಾಗಿ ಸೆಪ್ಟೆಂಬರ್ ತನಕ ಮುಂದುವರೆಯುತ್ತದೆ. ನವೆಂಬರ್ ಮತ್ತು ಡಿಸೆಂಬರ್ ನಲ್ಲೂ ತುಂತುರು ಮಳೆ ಮುಂದುವರೆಯುತ್ತದೆ. ಇಲ್ಲಿ ಸಾಮಾನ್ಯವಾದ ಮಳೆ ಆಗುತ್ತದೆ.

ಚಳಿಗಾಲ

ನವೆಂಬರ್ ನಿಂದ ಫೆಬ್ರವರಿಯ ತನಕ ಚಳಿಗಾಲ ಇರುತ್ತದೆ. ಡಿಸೆಂಬರ್ ಮತ್ತು ಜನವರಿ ಅತಿ ಕಡಿಮೆ ಉಷ್ಣತೆ ಇರುವ ತಿಂಗಳುಗಳಾಗಿವೆ. ಚಳಿಗಾಲದಲ್ಲಿ ಉಷ್ಣತೆ ಸುಮಾರು 22 ಡಿಗ್ರಿಗಳಷ್ಟಿರುತ್ತದೆ. ಚಳಿಗಾಲದ ಸಮಯವು ಇಲ್ಲಿ ಆಹ್ಲಾದಕರವಾಗಿರುತ್ತವೆ. ಸಂಜೆ ಮತ್ತು ರಾತ್ರೆಯ ವೇಳೆ ಉಷ್ಣತೆ ಸಾಕಷ್ಟು ಕಡಿಮೆಯಾಗಿ ಉಣ್ಣೆಯ ಬಟ್ಟೆಯ ಅವಶ್ಯಕತೆ ಕಾಣಿಸಬಹುದು.