ಈ ಸ್ಥಳದಲ್ಲಿರುವ ಸರ್ವ ಧರ್ಮ ಸಹಿಷ್ಣುತೆಗೆ ಇಲ್ಲಿರುವ ಲತೀಫ್ ಸಾಹೇಬ್ ದರ್ಗಾ ಒಂದು ಉತ್ತಮ ಉದಾಹರಣೆಯಾಗಿದೆ. ಇದು ಮುಸ್ಲಿಮರ ಪವಿತ್ರ ಸ್ಥಳವಾಗಿದ್ದರೂ ಎಲ್ಲಾ ಧರ್ಮದ ಸಾಕಷ್ಟು ಪ್ರವಾಸಿಗರು ಇಲ್ಲಿ ಆಗಮಿಸುತ್ತಾರೆ.
ಚಾರಣಿಗರಿಗೆ ಪ್ರಿಯವಾಗುವ ಎರಡು ಬೆಟ್ಟಗಳ ಮೇಲೆ ಈ ದರ್ಗಾವನ್ನು ಕಟ್ಟಲಾಗಿದೆ. ಹೀಗಾಗಿ ಯಾತ್ರಾರ್ಥಿಗಳ ಹೊರತಾಗಿ ಇತರ ಪ್ರವಾಸಿಗಳನ್ನೂ ನಾವಿಲ್ಲಿ ಕಾಣಬಹುದು. ಇಲ್ಲಿನ ದರ್ಗಾದ ಮುಂದೆ ಬೇಡಿದ್ದೆಲ್ಲ ಈಡೇರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಇಲ್ಲಿನ ಸ್ಥಳೀಯರಲ್ಲದೇ ದೂರದ ಊರುಗಳಿಂದಲೂ ಜನ ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ವರ್ಷಕ್ಕೊಮ್ಮೆ ಉರುಸ್ ಉತ್ಸವ ನಡೆಯುತ್ತದೆ. ಇದು ಸಾಕಷ್ಟು ಪ್ರಖ್ಯಾತವಾಗಿದ್ದು ಲಕ್ಷಾಂತರ ಮಂದಿ ಭಕ್ತರು ಸೇರುತ್ತಾರೆ ಮತ್ತು ದೊಡ್ಡ ಸಂಖ್ಯೆಯಲ್ಲಿ ಸ್ವಯಂ ಸೇವಕರೂ ಬರುತ್ತಾರೆ.
ಈ ದರ್ಗಾಕ್ಕೆ ಬಹಳ ಸಮೀಪದಲ್ಲಿ ಕಾಪುರಾಲಾ ಎಂಬ ಇನ್ನೊಂದು ಬೆಟ್ಟವೂ ಇದೆ.


Click it and Unblock the Notifications