ರೇಣುಕಾ ವನ್ಯಧಾಮವು ಸಿರ‍್ಮುರ‍್ ಜಿಲ್ಲೆಯಲ್ಲಿನ ದಡಾಹು ಸಮೀಪವಿರುವ ಜನಪ್ರಿಯ ಪ್ರವಾಸಿ ತಾಣ. ನಹಾನ್‌ನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಸುಮಾರು 402.80 ಹೆಕ್ಟೇರ‍್ ಅರಣ್ಯ ಪ್ರದೇಶವನ್ನು ವ್ಯಾಪಿಸಿರುವ ಈ ವನ್ಯಧಾಮವು ರೇಣುಕಾ ಕೆರೆಯನ್ನೂ ಆಕ್ರಮಿಸಿದೆ. ವಿವಿಧ ಪ್ರಬೇಧದ ಪ್ರಾಣಿ ಪಕ್ಷಿಗಳಿಗೆ ಈ ವನ್ಯಧಾಮವು ಆವಾಸಸ್ಥಾನವಾಗಿದೆ. ಹುಲಿ, ಚಿರತೆ, ಏಷ್ಯಾ ಹುಲಿ, ಸಾಂಬಾರ‍್, ಚಿಟ್ಟಲ್ ಮತ್ತು ಹಿಮಾಲಯದ ಕರಿ ಚಿರತೆಗಳು ಇಲ್ಲಿ ಕಾಣಸಿಗುತ್ತವೆ.
ಹಕ್ಕಿಗಳ ವಿವಿಧ ಪ್ರಬೇಧಗಳನ್ನೂ ಇಲ್ಲಿ ನೋಡಬಹುದು. ಲಯನ್ ಸಫಾರಿ, ಬೋಟಿಂಗ್ ಮತ್ತು ಚಾರಣವನ್ನು ಇಲ್ಲಿ ನಡೆಸಬಹುದು. ಮಿನಿ ಪ್ರಾಣಿ ಸಂಗ್ರಹಾಲಯವೂ ಇಲ್ಲಿದೆ. ಕೆಫೆಟೇರಿಯಾ ಮತ್ತು ಪ್ರವಾಸಿ ಬಂಗಲೆಗಳು ಇಲ್ಲಿದ್ದು ವನ್ಯಧಾಮಕ್ಕೆ ಬರುವ ಪ್ರವಾಸಿಗರಿಗೆ ಇವು ವಸತಿ ವ್ಯವಸ್ಥೆಯನ್ನು ಕಲ್ಪಿಸುತ್ತವೆ. ರೇಣುಕಾ ವನ್ಯಧಾಮದ ಸಮೀಪದಲ್ಲೇ ಒಂದು ದೇವಸ್ಥಾನವೂ ಇದೆ. ಇಲ್ಲಿಗೆ ಅಪಾರ ಪ್ರಮಾಣದ ಪ್ರವಾಸಿಗರು ಭೇಟಿ ಕೊಡುತ್ತಾರೆ.


Click it and Unblock the Notifications