ಹಿಮಾಚಲ ಪ್ರದೇಶವೆಂದರೆ ಬರೀ ಹಿಮ, ಚಳಿ, ಕಾಡು, ಪರ್ವತಗಳೆಂದಷ್ಟೇ ಅಂದುಕೊಂಡಿದ್ದರೆ ಅದು ತಪ್ಪು. ಈ ಪ್ರದೇಶ ವ್ಯಾಪಾರಕ್ಕೂ ಉತ್ತಮವಾದ ಆಯ್ಕೆಗಳನ್ನು ಒದಗಿಸುತ್ತವೆ. ಕೈಗೆಟುಕುವ ದರದಲ್ಲಿ ನಿಮ್ಮ ಆಯ್ಕೆಯ ವಸ್ತುಗಳು ಇಲ್ಲಿ ಲಭ್ಯ. ಸ್ಥಳೀಯರೇ ತಯಾರಿಸಿದ ರಗ್ಗುಗಳು, ಶಾಲುಗಳು ಪುನಃ ಎಂದು ಕರೆಯುವ ವಿಶೇಷವಾದ ಕಾಲುಚೀಲ, ಸಾಂಪ್ರದಾಯಿಕ ಬುಟ್ಟಿಗಳು, ಬಾದಾಮಿಯ ನೈಸರ್ಗಿಕ ತೈಲ, ಆಲಿವ್‌ನ ಉತ್ಪನ್ನಗಳು ಇಲ್ಲಿನ ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುತ್ತವೆ. ಕುಲ್ಲುವಿನ ಸಂತೆಯಲ್ಲಿ ಓಡಾಡುವುದೇ ಒಂದು ರೋಮಾಂಚಕ ಅನುಭವ.


Click it and Unblock the Notifications