ನಗ್ಗರ್ನ ಜನಪ್ರಿಯ ಪ್ರವಾಸಿ ತಾಣಗಳ ಪೈಕಿ ಮುರುಳೀಧರ ದೇವಸ್ಥಾನವೂ ಒಂದಾಗಿದ್ದು, ಇದು ಈಜಿಪ್ಟಿನ ಪಿರಮಿಡ್ಗಳ ವಾಸ್ತು ಶೈಲಿಯಲ್ಲಿ ಕಟ್ಟಲ್ಪಟ್ಟಿದೆ. ಹಿಂದೂ ಪುರಾಣಗಳಲ್ಲಿ ದೇವತೆಯಾದ ವಿಷ್ಣು ಮತ್ತು ಆತನ ಪತ್ನಿ ಲಕ್ಷ್ಮಿಯರ ಅವತಾರವೆಂದೇ ನಂಬಲಾದ ಕೃಷ್ಣ ಮತ್ತು ಆತನ ಪ್ರೇಯಸಿ ರಾಧೆಯ ಗರುಡಾರೂಢ ವಿಗ್ರಹಗಳು ಇಲ್ಲಿಯ ವಿಶೇಷ. ಮಧ್ಯಯುಗದ ಅವಧಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು ಎಂದು ನಂಬಲಾಗಿದೆ. ಈ ದೇವಾಲಯ ಬಹುಕಾಲದ ವರೆಗೆ ರಾಜಮನೆತನದ ಒಡೆತನದಲ್ಲಿತ್ತು.