ತೀರ್ಥನ್ ಮತ್ತು ಬಿಯಸ್ ನದಿಗಳಲ್ಲಿ ಮೀನುಗಾರಿಕೆಯನ್ನು ಕೈಗೊಳ್ಳುವುದಕ್ಕಾಗಿಯೇ ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ನಗ್ಗರ್, ಮೀನುಗಾರಿಕೆಯಲ್ಲಿ ಆಸಕ್ತಿಯುಳ್ಳವರ ಮನ ತಣಿಸುವಂಥ ಹಲವು ಸ್ಥಳಗಳನ್ನು ಹೊಂದಿದ್ದು ಅವುಗಳಲ್ಲಿ ಕತ್ರೇನ್, ರೈಸನ್, ಕ್ಯಾಸೋಲ್ ಮತ್ತು ನಗ್ಗರ್‌ಗಳು ಪ್ರಮುಖವಾಗಿದ್ದು, ವಿಶಿಷ್ಠವಾದ ಅನುಭವ ನೀಡುತ್ತವೆ. ಸೈನಿ ಕಣಿವೆಯಲ್ಲಿರುವ ತೀರ್ಥನ್ ನ ದಡದಲ್ಲಿ ಚಾರಣವನ್ನು ಕೈಗೊಳ್ಳುವುದಕ್ಕೂ ಅವಕಾಶವಿದೆ. ಬಿಯಸ್ ನದಿಯಲ್ಲಿ ದೋಣಿ ವಿಹಾರ ನಡೆಸಬಹುದಾಗಿದೆ. ಗುರ‍್ಗಲ್, ಗೂಗ್ಲಿ, ನಟ್ವಾ, ಬ್ರೌನ್ ಟ್ರೌಟ್ ಮತ್ತು ರೈನ್ಬೋ ಟ್ರೌಟ್ ನಂತಹ ಮೀನುಗಳು ಬಿಯಸ್ ನದಿಯಲ್ಲಿ ಸಿಗುತ್ತವೆ.


Click it and Unblock the Notifications