Search
  • Follow NativePlanet
Share
ಮುಖಪುಟ » ಸ್ಥಳಗಳು » ನಗೌರ್ » ಆಕರ್ಷಣೆಗಳು » ನಗೌರ್ ಕೋಟೆ

ನಗೌರ್ ಕೋಟೆ, ನಗೌರ್

2

ನಗರದಲ್ಲಿರುವ ನಗೌರ್ ಕೋಟೆ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇದೊಂದು ಸುಂದರವಾದ ಮರುಳಿನ ಕೋಟೆಯಾಗಿದ್ದು 2ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಗತಕಾಲದಲ್ಲಿ ಈ ಕೋಟೆಯು ಹಲವು ಯುದ್ಧಗಳನ್ನು ಕಂಡಿದೆ. ಇದು ರಾಜಸ್ಥಾನದ ಸಮತಟ್ಟಾದ ಭೂಮಿಯಲ್ಲಿ ರಚಿಸಲಾದ ಉತ್ತಮ ಕೋಟೆಯಾಗಿದ್ದು, ತನ್ನ ಬೃಹತ್ತಾದ ಆವರಣ ಮತ್ತು ಎತ್ತರವಾದ ಗೋಡೆಗಳಿಗೆ ಹೆಸರುವಾಸಿಯಾಗಿದೆ. ಈ ಕೋಟೆಯಲ್ಲಿ ಸುಂದರವಾದ ಉದ್ಯಾನಗಳು, ಅರಮನೆಗಳು, ಕಾರಂಜಿಗಳು ಮತ್ತು ದೇವಸ್ಥಾನಗಳನ್ನು ನೋಡಬಹುದಾಗಿದೆ.ನಾಗವಂಶಿಗಳಿಂದ ಈ ಕೋಟೆಯು ನಿರ್ಮಿಸಲ್ಪಟ್ಟಿದ್ದು, ನಂತರದಲ್ಲಿ ಮಹಮ್ಮದ ಬಾಹ್ಲೀಮನು ಇದನ್ನು ನವೀಕರಣಗೊಳಿಸಿದನು. ಈ ಕೋಟೆಗೆ ಮೂರು ಮುಖ್ಯ ಪ್ರವೇಶದ್ವಾರಗಳಿವೆ. ಮೊದಲನೆಯ ಪ್ರವೇಶ ದ್ವಾರವು ಶತ್ರುಗಳು ಹಾಗು ಅವರು ಉಪಯೋಗಿಸುತ್ತಿದ್ದ ಆನೆಗಳ ಬಲ ಪ್ರಯೋಗಗಳಿಂದ ರಕ್ಷಿಸಲು ಕಬ್ಬಿಣ ಹಾಗು ಕಟ್ಟಿಗೆಗಳಿಂದ ಮಾಡಲ್ಪಟ್ಟಿದೆ. ಎರಡನೆಯ ದ್ವಾರವು 'ಬೀಚ್ ಕಾ ಪೋಲ್' ಆಗಿದ್ದು ಮೂರನೆಯದನ್ನು 'ಕಚೇರಿ ಪೋಲ್' ಎನ್ನಲಾಗುತ್ತದೆ. ಕಚೇರಿ ಪೋಲ್ ಅಂದಿನ ಸಮಯದಲ್ಲಿ ನ್ಯಾಯಾಂಗವಾಗಿ ಬಳಕೆಯಾಗುತ್ತಿತ್ತು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed