Search
  • Follow NativePlanet
Share
ಮುಖಪುಟ » ಸ್ಥಳಗಳು» ಮೊಹಾಲಿ

ಮೊಹಾಲಿ (ಅಜಿತಗಡ್): ಪಂಜಾಬ್‍ನ ಐಟಿ ಸಿಟಿ

21

ಭಾರತದ ಪಂಜಾಬ್ ರಾಜ್ಯದಲ್ಲಿರುವ, ಚಂಡೀಘಡದ ಉಪನಗರವಾಗಿರುವ ಮೊಹಾಲಿಯನ್ನು ಈಗ ಅಜಿತಗಡ್ ಎಂದು ಕರೆಯಲಾಗುತ್ತದೆ. ಮೊಹಾಲಿ ಚಂಡೀಘಡದ ಟ್ರೈಸಿಟಿ(ಮೂರು ನಗರ)ಗಳಲ್ಲಿ ಒಂದಾಗಿದೆ, ಚಂಡೀಘಡ ಮತ್ತು ಹರಿಯಾಣದ ಪಂಚಕುಲ ಉಳಿದೆರಡು ನಗರಗಳು. ಮೊಹಾಲಿಯನ್ನು ಗುರು ಗೋವಿಂದ ಸಿಂಗ್ ನ ಮೊದಲ ಮಗ ಸಹಿಬ್ಜಾದಾ ಅಜಿತ್ ಸಿಂಗ್ ನೆನಪಿಗಾಗಿ ಸಾಸ್ (SAS)ನಗರ ಎಂದು ಕೂಡ ಕರೆಯಲಾಗುತ್ತದೆ.

2006 ರಲ್ಲಿ ಪಂಜಾಬ್ ಸರ್ಕಾರ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವವರೆಗೆ ಮೊಹಾಲಿ ರೂಪನಗರ ಜಿಲ್ಲೆಯ ಭಾಗವಾಗಿತ್ತು. ಕಾಲಾನಂತರದಲ್ಲಿ ಚಂಡೀಘಡದ ಹೊರವಲಯದಲ್ಲಿದ್ದ ಈ ನಗರ ಬೃಹತ್ ಅಭಿವೃದ್ದಿ ಹೊಂದಿತು ಮತ್ತು ಈಗ ಇಲ್ಲಿ ಐಟಿ ಕಂಪನಿಗಳು ಅದರಲ್ಲೂ ವಿದೇಶಿ ಕಂಪನಿಗಳಾದ ಕ್ವಾರ್ಕ್, ಡೆಲ್, ಫಿಲಿಪ್ಸ್ ನಂತಹ ಅಂತಾರಾಷ್ಟ್ರೀಯ ಕಂಪನಿಗಳನ್ನು ಕಾಣಬಹುದು.

ಮೊಹಾಲಿ ಮತ್ತು ಸುತ್ತಮುತ್ತಲ ಆಕರ್ಷಣೀಯ ಸ್ಥಳಗಳು

ಮೊಹಾಲಿಯಲ್ಲಿ ಪ್ರವಾಸಿಗರಿಗೆ ನೋಡಲು ಸಾಕಷ್ಟು ಸ್ಥಳಗಳಿವೆ. ಮೊಹಾಲಿ ಕ್ರಿಕೆಟ್ ಸ್ಟೇಡಿಯಂ ನಿಂದ ಪ್ರಾರಂಭಿಸಿ ಸುಕನ ಕೊಳ, ರಾಕ್ ಗಾರ್ಡನ್, ಚತ್ಬೀರ್ ಜೂ, ಸುಕನ ವನ್ಯಜೀವಿ ಅಭಯಾರಣ್ಯ, ರೋಸ್ ಗಾರ್ಡನ್ ಮತ್ತು ಭಕ್ರಾನಂಗಲ್ ಡ್ಯಾಮ್ ಇವುಗಳು ಮೊಹಾಲಿಯ ಜನಪ್ರಿಯ ಪ್ರವಾಸಿ ಸ್ಥಳಗಳು. ನಗರದಲ್ಲಿ ಸಾಕಷ್ಟು ಧಾರ್ಮಿಕ ಸ್ಥಳಗಳೂ ಇವೆ, ಅವುಗಳಲ್ಲಿ ಗುರುದ್ವಾರ ಅಂಬ ಸಾಹಿಬ್, ಗುರುದ್ವಾರ ನಡಾ ಸಾಹಿಬ್, ಮಾನಸಾ ದೇವಿ ದೇವಾಲಯ ಮತ್ತು ನಭಾ ಸಾಹಿಬ್ ಗಳು ಮುಖ್ಯವಾದವುಗಳು. ಮೊಹಾಲಿಯಿಂದ ರಸ್ತೆ ಮಾರ್ಗದಲ್ಲಿ ಕೆಲವೇ ಘಂಟೆಗಳ ಮಾರ್ಗದಲ್ಲಿ ಶಿಮ್ಲಾ, ಪಂಚಕುಲ ಮತ್ತು ಶರಣ್ಪುರ ಮುಂತಾದ ಪ್ರವಾಸಿ ಸ್ಥಳಗಳು ಕೂಡ ಇವೆ. ಮೊಹಾಲಿಗೆ ಭೇಟಿ ನೀಡುವ ಪ್ರವಾಸಿಗರು ಸಾಮಾನ್ಯವಾಗಿ ಹತ್ತಿರದ ಇತರ ಸ್ಥಳಗಳಿಗೂ ಭೇಟಿ ನೀಡಲೆಂದು ಅನುಕೂಲ ಮಾಡಿಕೊಂಡು ಬರುತ್ತಾರೆ.

ಮೊಹಾಲಿ ತಲುಪುವ ಮಾರ್ಗ

ಮೊಹಾಲಿಯನ್ನು ಚಂಡೀಘಡ ದ ರೇಲ್ವೆ ಅಥವಾ ವಿಮಾನ ನಿಲ್ದಾಣದ ಮೂಲಕ ಸುಲಭವಾಗಿ ತಲುಪಬಹುದು. ಮೋಹಾಲಿಯ ಸುತ್ತಮುತ್ತಲಿನ ಸ್ಥಳಗಳಿಂದಲು ಕೂಡ ಇಲ್ಲಿಗೆ ತಲುಪಲು ಸಾಕಷ್ಟು ಬಸ್ಸುಗಳು ಅಥವಾ ಟ್ಯಾಕ್ಸಿಗಳು ದೊರೆಯುತ್ತವೆ.

ಮೊಹಾಲಿಯ ವಾತಾವರಣ

ಮೊಹಾಲಿ ಆರ್ದ್ರ ಬೇಸಿಗೆ, ಹಿತಕರ ಚಳಿಗಾಲ ಮತ್ತು ಅನಿರೀಕ್ಷಿತ ಮಳೆ ಒಳಗೊಂಡ ವಿಶಿಷ್ಟ ಲಕ್ಷಣ ಹೊಂದಿರುವ  ಒಂದು ಉಪೋಷ್ಣವಲಯದ ಹವಾಮಾನವನ್ನು ಹೊಂದಿದೆ. ಮೊಹಾಲಿ ಪ್ರವಾಸೋದ್ಯಮಕ್ಕೆ ಉತ್ತಮ ಸಮಯ ಅಕ್ಟೋಬರ್ ನಿಂದ ಮಾರ್ಚ್.

ಮೊಹಾಲಿ ಪ್ರಸಿದ್ಧವಾಗಿದೆ

ಮೊಹಾಲಿ ಹವಾಮಾನ

ಉತ್ತಮ ಸಮಯ ಮೊಹಾಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮೊಹಾಲಿ

  • ರಸ್ತೆಯ ಮೂಲಕ
    ಹತ್ತಿರದ ಪ್ರದೇಶಗಳಾದ ದೆಹಲಿ, ಚಂಡೀಘಡ ಮತ್ತು ಅಂಬಾಲಾದಿಂದ ಮೊಹಾಲಿಗೆ ರಸ್ತೆ ಮಾರ್ಗ ಅನುಕೂಲಕರವಾಗಿದೆ. ಪಂಜಾಬ್ ಮತ್ತು ಹರಿಯಾಣಗಳಿಂದ ಬಸ್ಸಿನ ಸಂಪರ್ಕವಿದೆ. ಅಟೋ ಮತ್ತು ಟ್ಯಾಕ್ಸಿ ಮೂಲಕ ರಸ್ತೆ ಮಾರ್ಗವಾಗಿ ಮೊಹಾಲಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮೊಹಾಲಿಯಲ್ಲಿ ರೈಲು ನಿಲ್ದಾಣ ಇಲ್ಲದಿರುವುದರಿಂದ ಇತರ ರಾಜ್ಯಗಳಿಂದ ಪ್ರವಾಸಿಗರು ಚಂಡೀಘಡ ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ಮೊಹಾಲಿ ತಲುಪಬಹುದು. ಚಂಡೀಘಡ ರೈಲ್ವೆ ನಿಲ್ದಾಣ ಮೊಹಾಲಿಯಿಂದ ಪೂರ್ವಕ್ಕೆ 19 ಕಿ ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮೊಹಾಲಿಯಲ್ಲಿ ವಿಮಾನ ನಿಲ್ದಾಣವಿದೆ, ಆದಾಗ್ಯೂ ಚಂಡೀಘಡ ವಿಮಾನ ನಿಲ್ದಾಣದಿಂದ ಪೂರ್ವಕ್ಕೆ 15 ಕಿ ಮೀ ನಲ್ಲಿ ಇಲ್ಲಿಗೆ ತಲುಪಬಹುದು. ಬೇರೆ ಬೇರೆ ಪ್ರದೇಶಗಳಾದ ದೆಹಲಿ, ಮುಂಬೈ, ಅಹ್ಮದಾಬಾದ್ ನಿಂದ ಚಂಡೀಘಡ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ಮೊಹಾಲಿ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Sun
Return On
27 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Sun
Check Out
27 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Sun
Return On
27 Apr,Mon