Search
 • Follow NativePlanet
Share

ಮೇಡಕ್ - ಪ್ರತಿಯೊಂದು ದಿನವು ಉತ್ಸಾಹದಿಂದ ಕೂಡಿದ ಸ್ಥಳ

15

ಆಂಧ್ರಪ್ರದೇಶದ ರಾಜಧಾನಿ ಹೈದದರಾಬಾದ್‌ನಿಂದ ನೂರು ಕಿಲೋಮೀಟರ್‌ ದೂರದಲ್ಲಿರುವ ಮೇಡಕ್‌ ಜಿಲ್ಲೆ ಐತಿಹಾಸಿಕ ಹಿನ್ನೆಲೆಯುಳ್ಳ ತಾಣವಾಗಿದೆ. ಮೂಲದಲ್ಲಿ ಸಿದ್ದಾಪುರಂ ಎಂದು ಕರೆಯಲಾಗುತ್ತಿದ್ದ ಈ ಪಟ್ಟಣಕ್ಕೆ ಗುಲ್ಶನಾಬಾದ್‌ ಎಂದು ಮರುನಾಮಕರಣ ಮಾಡಲಾಯಿತು ಎಂದು ನಂಬಲಾಗಿದೆ.  ಕಾಕತೀಯ ಅರಸು ಮನೆತನದ ಆಳ್ವಿಕೆಯ ಅವಧಿಯಲ್ಲಿ ಮೇಡಕ್‌ ಉಚ್ಛ್ರಾಯ ಸ್ಥಿತಿಗೆ ಬಂತು. ಕಾಕತೀಯ ದೊರೆ ಪ್ರತಾಪರುದ್ರ ಮೇಡಕ್ ಅನ್ನು ರಕ್ಷಿಸಲು ಕೋಟೆಯನ್ನು ನಿರ್ಮಿಸಿದ. ಪರ್ವತದ ಮೇಲೆ ನಿರ್ಮಿಸಿರುವ ಈ ಕೋಟೆಗೆ ಮೆಥಾಕುರ್‌ದುರ್ಗ ಎಂದು ಹೆಸರಿಡಲಾಯಿತಾದರೂ, ಸ್ಥಳೀಯರು ಮೇಥುಕುಸೀಮಾ ಎಂದೇ ಕರೆಯುತ್ತಾರೆ. ಮೇಥುಕು ಅಂದರೆ ತೆಲುಗಿನಲ್ಲಿ ಬೇಯಿಸಿಟ್ಟ ಧಾನ್ಯ ಎಂದು ಅರ್ಥ.

ಬಥುಕಮ್ಮ ಪಡುಗ: ಶರತ್ಕಾಲದ ಹಬ್ಬಮೇಡಕ್‌ ಹಬ್ಬ ಮತ್ತು ಉತ್ಸವಗಳಿಗೆ ಹೆಸರುವಾಸಿಯಾದ ಪಟ್ಟಣವಾಗಿದ್ದು, ವರ್ಷದ ಹೆಚ್ಚಿನ ದಿನಗಳಲ್ಲಿ ಇಲ್ಲಿ ಒಂದಲ್ಲಾ ಒಂದು ಉತ್ಸವಗಳು ನಡೆಯುತ್ತಲೇ ಇರುತ್ತವೆ. ಆಂಧ್ರಪ್ರದೇಶದಲ್ಲಿ ಆಚರಿಸುವ ಎಲ್ಲ ಉತ್ಸವಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಬಥುಕಮ್ಮ ಪಡುಗ ಇಲ್ಲಿ ಅತೀ ವಿಜೃಂಭಣೆಯಿಂದ ಆಚರಿಸುವ ಹಬ್ಬವಾಗಿದ್ದು, ತೆಲಂಗಾಣ ಪ್ರದೇಶದ ಮಹಿಳೆಯರು ಹೆಚ್ಚಾಗಿ ಭಾಗವಹಿಸುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ನಡೆಯುವ ಈ ಹಬ್ಬದಲ್ಲಿ ಗೌರಿಯನ್ನು ಬಥುಕಮ್ಮನ ಹೆಸರಲ್ಲಿ ಪೂಜಿಸಲಾಗುತ್ತದೆ. ಬಥುಕಮ್ಮ  ಹೆಸರಿನಲ್ಲಿ ಹಬ್ಬದ ದಿನಗಳಲ್ಲಿ ಗೌರಿ ದೇವಿ ಸಂಚರಿಸುವಳು ಎಂಬ ನಂಬಿಕೆಯೂ ಜನರಲ್ಲಿದೆ. ಬಥುಕಮ್ಮ ಪಡುಗ ಶರತ್ಕಾಲದ ಹಬ್ಬ. ಒಂಬತ್ತು ದಿನಗಳ ಕಾಲ ನಡೆಯುವ ಈ ಹಬ್ಬ ದಸರಾದಲ್ಲಿ ಕೊನೆಗೊಳ್ಳುತ್ತದೆ.

ಮೇಡಕ್: ಸೊಬಗಿನ ನಿಸರ್ಗ ಸರಣಿ...

ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿರನ್ನು ಸೆಳೆಯುವ ಸೊಬಗಿನ ಪ್ರವಾಸೀ ತಾಣಗಳನನ್ನು ಮೇಡಕ್ ತನ್ನೊಡಲಲ್ಲಿ ಇಟ್ಟುಕೊಂಡಿದೆ. ಸಾಯಿಬಾಬಾ ಭಕ್ತರು ನಿರ್ಮಿಸಿದ ಸಾಯಿ ಮಂದಿರಕ್ಕೆ ಹೊರರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಮೇಡಕ್, ಗೌತಮ್ ಗುಟ್ಟಾ ಸರೋವರ, ಸಣ್ಣ ಪುಟ್ಟ ಸುಂದರವಾದ ಹಳ್ಳಿಗಳು ಮತ್ತು ಅನೇಕ ಆಕರ್ಷಕವಾದ ದೇವಾಲಯಗಳನ್ನೂ ಹೊಂದಿದೆ. ವನ್ಯ ಜೀವಿ ಪ್ರಿಯರನ್ನು ಇಲ್ಲಿಯ ಪೋಚರಂ ಅರಣ್ಯ ಮತ್ತು ವನ್ಯಜೀವಿ ಕೇಂದ್ರ ಕೈಬೀಸಿ ಕರೆಯುತ್ತದೆ. ಇಲ್ಲಿನ ಪ್ರಾಣಿ, ಪಕ್ಷಿ ಸಂಕುಲಗಳನ್ನು ವೀಕ್ಷಿಸುವ ಸಲುವಾಗಿ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಒಂದಾನೊಂದು ಕಾಲದಲ್ಲಿ ಹೈದರಾಬಾದ್ ನಿಜಾಮರು ಇದೇ ವನ್ಯಧಾಮದಲ್ಲಿ ಬೇಟೆಯಾಡುತ್ತಿದ್ದರೆಂಬ ಪ್ರತೀತಿಯೂ ಇದೆ. ಸದ್ಯ ಈ ಪ್ರದೇಶ ಮೇಡಕ್‌ನ ಪ್ರಮುಖ ಪ್ರವಾಸೀ ಆಕರ್ಷಣೆಯಾಗಿದ್ದು, ಪಿಕ್‌ನಿಕ್‌ ಸಲುವಾಗಿ ಹೆಚ್ಚಿನ ಜನ ಆಗಮಿಸುತ್ತಾರೆ.

ಇಲ್ಲಿಯೇ ಇರುವ ಸಿಂಗೂರು ಆಣೆಕಟ್ಟು ಮತ್ತೊಂದು ಆಕರ್ಷಣೆ. ಸಮೀಪದಲ್ಲಿಯೇ ಮಂಜೀರಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನಿಜಾಮ್ ಸಾಗರ ಆಣೆಕಟ್ಟು ಕೂಡ ವಿಹಾರಿ ಮನೋಭಾವದವರನ್ನು ಕೈ ಬೀಸಿ ಕರೆಯುತ್ತದೆ. ಮಂಜೀರಾ ವನ್ಯಜೀವಿ ಮತ್ತು ಪಕ್ಷಿಗಳ ಆಶ್ರಯಧಾಮ ಸಹ ಮೇಡಕ್ ಪಟ್ಟಣದ ಸಮೀಪದಲ್ಲಿಯೇ ಇದೆ. ವಂಶಾಭಿವೃದ್ದಿಯ ಸಮಯದಲ್ಲಿ ಬೇರೆ ಬೇರೆ ಸ್ಥಳದಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಅವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ ಸದೃಶವಾದದ್ದು.

ಪ್ರವಾಸಕ್ಕೆ ಹಬ್ಬಗಳ ಮೆರಗು

ಮೇಡಕ್ ಮತ್ತು ಅದರ ಸುತ್ತಮುತ್ತ ಅನೇಕ ಐತಿಹಾಸಿಕ ದೇವಾಲಯಗಳಿವೆ. ಇವುಗಳಲ್ಲಿ ಶ್ರೀ ಸರಸ್ವತಿ ಕ್ಷೇತ್ರ ದೇವಸ್ಥಾನ, ವೇಲುಪುಗೊಂಡ ಶ್ರೀ ತುಂಬರುನಾಥ ದೇವಾಲಯ ಮತ್ತು ಎಡುಪಾಯಲ ದುರ್ಗಾ ಭವಾನಿ ಗುಡಿ ಪ್ರಮುಖವಾಗಿದೆ. ಈ ದೇವಾಲಯಗಳ ಕಾರಣದಿಂದಾಗಿಯೇ  ಮೇಡಕ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಹಿಂದೂ ಸಮುದಾಯದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವಾಸಿಸುತ್ತಿರುವುದರಿಂದ ಹಿಂದೂ ಆಚರಣೆಗಳೇ ಇಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತದೆ. ಈ ಹಬ್ಬಗಳಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮ ಪ್ರವಾಸದ ಅನುಭವಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

ಮೇಡಕ್ ಪ್ರಸಿದ್ಧವಾಗಿದೆ

ಮೇಡಕ್ ಹವಾಮಾನ

ಮೇಡಕ್
15oC / 59oF
 • Sunny
 • Wind: SW 6 km/h

ಉತ್ತಮ ಸಮಯ ಮೇಡಕ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮೇಡಕ್

 • ರಸ್ತೆಯ ಮೂಲಕ
  ಮೇಡಕ್‌ ಗೆ ಉತ್ತಮ ರಸ್ತೆ ಸಂಪರ್ಕ ಇದೆ. ರಾಜ್ಯ ಸರ್ಕಾರ ಪ್ರಮುಖ ಪಟ್ಟಣಗಳಿಂದ ಸಾರಿಗೆ ಬಸ್‌ ಓಡಿಸುತ್ತದೆ. ನೆರೆಯ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಂದಲೂ ಸಾಕಷ್ಟು ಬಸ್‌ಗಳು ಇಲ್ಲಿಗೆ ಬರುತ್ತವೆ. ಹೈದರಾಬಾದ್ ಮತ್ತು ವಿಶಾಖಪಟ್ಟಣಂ ನಿಂದಲೂ ಸಹ ಡಿಲಕ್ಸ್ ಮತ್ತು ವೋಲ್ವೋ ಬಸ್ ವ್ಯವಸ್ಥೆಯೂ ಇರುವುದರಿಂದ ನಿಮ್ಮ ಪ್ರಯಾಣ ಆರಾಮದಾಯಕವಾಗಿ ಮಾಡಿಕೊಳ್ಳಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮೇಡಕ್‌ಗೆ ಹತ್ತಿರದಲ್ಲಿರುವ ರೈಲು ನಿಲ್ದಾಣವೆಂದರೆ ಕಾಮರೆಡ್ಡಿಪಟ್ಟಣ ನಿಲ್ದಾಣ. ಇದು ಮೇಡಕ್‌ನಿಂದ 60 ಕಿಲೋಮೀಟರ್‌ ದೂರದಲ್ಲಿದೆ. ಹೈದರಾಬಾದ್, ವಿಶಾಖಪಟ್ಟಣಂ, ಕರೀಂನಗರ್ ಮತ್ತು ಸಿಕಂದರಾಬಾದ್ ಸೇರಿದಂತೆ ಆಂಧ್ರ ಪ್ರದೇಶದ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿಂದ ಮೇಡಕ್ ಗೆ ತೆರಳಲು ಬಸ್‌ ಮತ್ತು ಇತರೆ ವಾಹನ ಸೌಕರ್ಯವನ್ನು ಅವಲಂಬಿಸಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹೈದರಾಬಾದ್‌ ಮೇಡಕ್‌ ಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣ. ಕೇವಲ 100 ಕಿಲೊಮೀಟರ್‌ ಅಂತರದಲ್ಲಿ ಈ ನಿಲ್ದಾಣವಿದೆ. ಅಲ್ಲಿಂದ ಮೇಡಕ್‌ ತಲುಪಲು ಟ್ಯಾಕ್ಸಿಯನ್ನು ಅವಲಂಬಿಸಬಹುದು. 1500 -2000 ರೂ. ಗಳಿಗೆ ಟ್ಯಾಕ್ಸಿ ಬಾಡಿಗೆಗೆ ಸಿಗುತ್ತದೆ. ಬಸ್ ವ್ಯವಸ್ಥೆಯೂ ಇದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
02 Oct,Fri
Return On
03 Oct,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
02 Oct,Fri
Check Out
03 Oct,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
02 Oct,Fri
Return On
03 Oct,Sat
 • Today
  Medak
  15 OC
  59 OF
  UV Index: 6
  Sunny
 • Tomorrow
  Medak
  15 OC
  60 OF
  UV Index: 6
  Partly cloudy
 • Day After
  Medak
  14 OC
  58 OF
  UV Index: 6
  Partly cloudy