Search
  • Follow NativePlanet
Share
ಮುಖಪುಟ » ಸ್ಥಳಗಳು » ಮೇಡಕ್ » ಆಕರ್ಷಣೆಗಳು » ಪೋಚರಂ ಅಭಯಾರಣ್ಯ

ಪೋಚರಂ ಅಭಯಾರಣ್ಯ, ಮೇಡಕ್

2

ಮೇಡಕ್‌ನಿಂದ ಕೇವಲ 15 ಕಿಲೋಮೀಟರ್‌ಗಳ ಅಂತರದಲ್ಲಿರುವ ಪೋಚರಂ ಅಭಯಾರಣ್ಯ ವನ್ಯಜೀವಿ ಮತ್ತು ಪಕ್ಷಿ ಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಹೈದರಾಬಾದ್‌ನಿಂದ ಇಲ್ಲಿಗೆ 115 ಕಿಲೋಮೀಟರ್‌. ಇಲ್ಲಿಗೆ ಸರ್ಕಾರಿ ಬಸ್‌ ಸೇವೆ ಇಲ್ಲದ ಕಾರಣದಿಂದ ನೀವು ಖಾಸಗಿ ವಾಹನಗಳ ಮೂಲಕವೇ ತೆರಳಬೇಕು.

ಹೈದರಾಬಾದ್‌ ನಿಜಾಮರು ಆಳ್ವಿಕೆ ನಡೆಸುತ್ತಿದ್ದಾಗ ಅವರು ಬೇಟೆಯಾಡಲು ಈ ಅರಣ್ಯ ಪ್ರದೇಶಕ್ಕೇ ಬರುತ್ತಿದ್ದರು. 20 ನೇ ಶತಮಾನದ ಮಧ್ಯಭಾಗದಲ್ಲಿ ವನ್ಯಜೀವಿ ರಕ್ಷಿತ ಪ್ರದೇಶವಾಗಿ ಘೋಷಣೆಯಾದ ಬಳಿಕ ಇಲ್ಲಿ ಪ್ರಾಣಿಗಳ ಬೇಟೆ ನಿಂತಿದೆ. ನಿಸರ್ಗ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದೆ. ಅಲ್ಲೈರ್‌ ಆಣೆಕಟ್ಟು ನಿರ್ಮಾಣದಿಂದ ಉಂಟಾದ ಹಿನ್ನೀರು ಇಲ್ಲಿನ ಸೊಬಗನ್ನು ಇನ್ನಷ್ಟು ಹೆಚ್ಚಿಸಿದ್ದು ಪೋಚರಂ ಸರೋವರ ಎಂದೇ ಹೆಸರುವಾಸಿಯಾಗಿದೆ.

ಅಪರೂಪದ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳು ಇಲ್ಲಿನ ವಿಶೆಷವಾಗಿದ್ದು, ಕಾಡುನಾಯಿ, ತೋಳ, ಚಿರತೆ, ಕಾಡು ಬೆಕ್ಕು, ಹುಲ್ಲೆ ಮತ್ತು ಕರಡಿಗಳಿವೆ. ತೆರೆದ ಕೊಕ್ಕಿನ ಕೊಕ್ಕರೆ, ಬಾರ್ ಹೆಡೆಡ್ ಹೆಬ್ಬಾತು ಮತ್ತು ಬ್ರಾಹ್ಮಿನಿ ಬಾತುಕೋಳಿಗಳು ಪ್ರತಿ ವರ್ಷ ಇಲ್ಲಿಗಗೆ ವಲಸೆ ಬಂದು ಸಂತಾನೋತ್ಪತ್ತಿ ನಡೆಸುತ್ತವೆ. ಹುಲ್ಲೆಗಳು ಮತ್ತು ಕರಡಿಗಳನ್ನು ನೋಡುವ ಸಲುವಾಗಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ನವೆಂಬರ್‌ ತಿಂಗಳಿನಿಂದ ಜನೆವರಿ ವರೆಗೆ ಇಲ್ಲಿಗೆ ಬರಲು ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue