Search
  • Follow NativePlanet
Share
ಮುಖಪುಟ » ಸ್ಥಳಗಳು » ಮೇಡಕ್ » ಹವಾಮಾನ

ಮೇಡಕ್ ಹವಾಮಾನ

ಮೇಡಕ್ ಭೇಟಿಗೆ ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳು ಅತ್ಯಂತ ಸೂಕ್ತವಾಗಿವೆ. ಈ ಅವಧಿಯಲ್ಲಿ ತಾಪಮಾನ ಕೆಳಗೆ ಬರುತ್ತದೆ. ಬೇಸಿಗೆಯ ಸೂರ್ಯನ ಬೇಗೆಯ ಕಿರಣಗಳು ಕಡಿಮೆಯಾಗುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ವಿಪರರೀತ ಚಳಿ ಇರುವುದರಿಂದ ನಿಮ್ಮೊಂದಿಗೆ ಉಣ್ಣೆ ಬಟ್ಟೆಗಳನ್ನು ತರುವುದು ಉತ್ತಮವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆ ಮಾರ್ಚ್‌ನಲ್ಲಿ ಆರಂಭವಾಗಿ ಮೇ ಕೊನೆಯವರೆಗೂ ಇರುತ್ತದೆ. ಬೇಸಿಗೆಯಲ್ಲಿ ಅತಿ ಬಿಸಿ ಮತ್ತು ಶುಷ್ಕ ಹವಾಮಾನವಿರುತ್ತದೆ. ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ವರೆಗೂ ಇರುತ್ತದೆ. ಬೇಸಿಗೆಯಲ್ಲಿ ಇಲ್ಲಿ ಪ್ರವಾಸ ಮಾಡುವುದು ಪ್ರಯಾಸವೇ ಸರಿ.

ಮಳೆಗಾಲ

ಈ ಪ್ರದೇಶ ನೈಋತ್ಯ ಮುಂಗಾರು ಮಳೆಯನ್ನು ಅನುಭವಿಸುತ್ತದೆ. ಜೂನ್‌ನಿಂದ ಆರಂಭವಾಗಿ ಸೆಪ್ಟೆಂಬರ್ ಕೊನೆಯವರೆಗೂ ಸುರಿಯುತ್ತದೆ. ಗಾಳಿಯನ್ನು ಅವಲಂಬಿಸಿ ಮಳೆಯ ಪ್ರಮಾಣ ಏರುಪೇರಾಗುತ್ತದೆ. ತಾಪಮಾನ ಮಳೆಗಾಲದಲ್ಲಿ 30 ಡಿಗ್ರಿ ಸೆಲ್ಶಿಯಸ್ ಗಳಷ್ಟು ಕೆಳಗೆ ಬರುತ್ತದೆ.

ಚಳಿಗಾಲ

ಸಾಮಾನ್ಯವಾಗಿ ಚಳಿಗಾಲದ ಅವಧಿ ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ. ಅದರಲ್ಲೂ ಚಳಿಗಾಲದಲ್ಲಿ ಡಿಸೆಂಬರ್‌ ಮತ್ತು ಜನವರಿ ತಿಂಗಳುಗಳು ಅತ್ಯಂತ ಚಳಿಗಾಲವಾಗಿರುವ ತಿಂಗಳುಗಳಾಗಿವೆ. ಕನಿಷ್ಟ ತಾಪಮಾನ ಸುಮಾರು 25 ಡಿಗ್ರಿ ಮತ್ತು ಗರಿಷ್ಠ ಉಷ್ಣಾಂಶ 35 ಡಿಗ್ರಿಗಳಷ್ಟಿರುತ್ತದೆ. ಸೂರ್ಯನ ಬಿಸಿ ತಾಗದೇ ಹಗಲು, ರಾತ್ರಿಗಳು ತಂಪಾಗಿ ಹಿತಕರವಾಗಿರುತ್ತದೆ.