ಗಂಗೈಕೊಂಡ ಚೋಳಪುರಂನ ದೇವಾಲಯದಂತೆ ಶ್ರೀ ಅಯ್ಯಪ್ಪರ್ ದೇವಸ್ಥಾನ ಕೂಡ ಪುರಾತತ್ವ ಮಹತ್ವವನ್ನು ಪಡೆದಿದೆ. ಇಲ್ಲಿ ಕುಲೋತ್ತುಂಗ ಚೋಳರ ಕಾಲದ ಶಿಲಾಶಾಸನಗಳಿವೆ. ಕುಲೋತ್ತುಂಗ ಚೋಳರು ಹಬ್ಬಗಳಿಗೆ ಹೆಸರುವಾಸಿಯಾಗಿದ್ದರು. ವರ್ಷ ಪೂರ್ತಿ ತಿಂಗಳಿಗೆ ಒಂದರಂತೆ 12 ಹಬ್ಬಗಳನ್ನು ಆಚರಿಸಲಾಗುತ್ತಿತಂತೆ. ಇಲ್ಲಿನ ದೇವರು ಧರ್ಮಸಂವರ್ಧಾನಿ ಅಂದರೆ ಧರ್ಮವನ್ನು ಕಾಪಾಡುವವನು ಎಂದರ್ಥ. ಇಲ್ಲಿನ ಶಾಸನಗಳು ಅಷ್ಟು ಸ್ಪಷ್ಟವಿಲ್ಲದಿದ್ದರೂ ಆಕಾಲದ ಬಗೆಗೆ ಕೆಲವು ಮಾಹಿತಿಗಳನ್ನು ನೀಡುತ್ತವೆ.


Click it and Unblock the Notifications