ಪುನುಗೀಶ್ವರರಾರ್ ದೇವಸ್ಥಾನದಲ್ಲಿ ಶಿವನು ತನ್ನ ಪತ್ನಿ ಶಾಂತನಾಯಕಿಯೊಂದಿಗೆ ಪೂಜೆಗೊಳ್ಳುತ್ತಾನೆ. ಇದು ಕೂರೈನಾಡುವಿನಲ್ಲಿದೆ. ಈ ದೇವಸ್ಥಾನವು ಪುನುಕು ಸಿದ್ಧಾದರ್ ಎಂಬುವವರಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಆತ ಇಲ್ಲಿಯೇ ಮೋಕ್ಷ ಪಡೆದರಂತೆ. ಮೈಲಾಡುತುರೈ ಹಲವಾರು ಸಂತರಿಗೆ ತವರೂರು. ಇಲ್ಲಿ ಅವರನ್ನು ಸಿದ್ಧಾಧರರು ಎಂದು ಕರೆಯಲಾಗುತ್ತದೆ. ಮೈಲಾಡುತುರೈ ಮಹಾಂಗಳ್ ಎಂಬ ಸಾಹಿತ್ಯ ಕೃತಿಯು ಇಲ್ಲಿನ ಸಾಧುಗಳ ಬಗ್ಗೆ ಇರುವಂತದ್ದು. ಮೈಲಾಡುತುರೈನ ಹೊರಭಾಗದಲ್ಲಿರುವ ಹಳ್ಳಿ ಸಿದ್ಧರಕಾಡು. ಇಲ್ಲಿ ಒಂದು ಕಾಲದಲ್ಲಿ ಹಲವಾರು ಸಾಧುಗಳು ವಾಸವಾಗಿದ್ದರಂತೆ.
ಕಾಂಚೀಪುರಂನಂತೆ ಕೂರೈನಾಡು ಕೂಡ ವಸ್ತ್ರಗಳಿಗೆ ಪ್ರಸಿದ್ಧವಾದದ್ದು. ಕಾಂಚಿಪುರಂ ರೇಷ್ಮೆ ವಸ್ತ್ರಗಳಿಗೆ ಪ್ರಸಿದ್ಧಿ ಪಡೆದಿದೆ. ಕೂರೈನಾಡು ಒಂಭತ್ತು ಗಜದ ಸೀರೆಯ ನೇಯ್ಗೆಗೆ ಪ್ರಸಿದ್ಧವಾದದ್ದು. ಕೂರೈ ಎಂದರೆ ತಮಿಳಿನಲ್ಲಿ ಬಟ್ಟೆ ಎಂದರ್ಥ. ಕೂರೈನಾಡುವಿಗೆ ಬರಗಾಲ ಬಂದಾಗ ಬ್ರಾಹ್ಮಣರು ತಮ್ಮ ಮನೆಗಳಲ್ಲಿನ ಮದುವೆಗೆ ಇಲ್ಲಿನ ಒಂದು ಸೀರೆಯನ್ನು ಕೊಳ್ಳುವುದಾಗಿ ಮಾತು ಕೊಟ್ಟರಂತೆ. ಇದರಿಂದ ಅವರಿಗೆ ನೆರವಾಗಬಹುದು ಎಂಬ ಉದ್ದೇಶದಿಂದ ಹೀಗೆ ಮಾಡಿದರಂತೆ. ಆದ್ದರಿಂದಲೇ ಇಂದಿಗೂ ಸಂಪ್ರದಾಯಸ್ಥ ಐಯ್ಯರ್ ಮದುವೆಗಳಲ್ಲಿ ಇಂದಿಗೂ ವಧುವಿಗೆ ಕೂರೈಸೀರೆಯನ್ನು ಉಡಿಸುತ್ತಾರೆ.


Click it and Unblock the Notifications