ಶ್ರೀ ಮಯೂರನಾಥಸ್ವಾಮಿ ದೇವಸ್ಥಾನವು ಮೈಲಾಡುತುರೈನ ಅತಿ ದೊಡ್ಡ ದೇವಸ್ಥಾನ. ಮಯೂರದ ಗಂಡನಾದ ಮಯೂರನಾಥಸ್ವಾಮಿಯು ಇಲ್ಲಿನ ಮೂಲವಿಗ್ರಹ. ಶಿವನ ಕೋಪಕ್ಕೆ ತುತ್ತಾಗಿ ಶಾಪಗ್ರಸ್ತಳಾದ ಪಾರ್ವತಿಯು ನವಿಲಾಗಿ ಹುಟ್ಟುತ್ತಾಳೆ. ಈ ಪ್ರದೇಶದಲ್ಲಿ ಶಾಪ ವಿಮೋಚನೆಗಾಗಿ ಶಿವ ಪೂಜೆಯನ್ನು ಕೈಗೊಂಡಳು ಎಂಬುದು ಇಲ್ಲಿನ ಸ್ಥಳ ಪುರಾಣ. ಈ ಕತೆಯನ್ನು ಹೇಳುವಂತೆ ಇಲ್ಲಿನ ವಿಗ್ರಹದ ಕೆತ್ತನೆಯಿದೆ. ಇಲ್ಲಿನ ಪುರಾತನ ಶಾಸನ ಕುಲೋತ್ತುಂಗ ಚೋಳರ ಕಾಲಕ್ಕೆ ಸೇರಿದ್ದು. ಚೋಳರ ವಾಸ್ತುಶಿಲ್ಪ ಕಲೆಗೆ ಉದಾಹರಣೆಯಂತಿದೆ ಈ ದೇವಾಲಯ. ಈ ದೇವಾಲಯದಲ್ಲಿ ನಡೆಯುವ ಮಯೂರ ನಾಟ್ಯಾಂಜಲಿ ಎನ್ನುವ ನೃತ್ಯ ಕಾರ್ಯಕ್ರಮವನ್ನು ನಟರಾಜನಿಗೆ ಅರ್ಪಿಸಲಾಗಿದೆ. ಇದನ್ನು ಸಪ್ತವಾರಂಗಲ್ ಟ್ರಸ್ಟ್ನವರು ಮಹಾ ಶಿವರಾತ್ರಿಯಂದು ನಡೆಸುತ್ತಾರೆ. ಚಿದಂಬರಂನಲ್ಲಿ ನಡೆಯುವ ನಾಟ್ಯಾಂಜಲಿ ಉತ್ಸವದ ಮಾದರಿಯಲ್ಲೇ ಇದು ಕೂಡ ಇರುತ್ತದೆ.


Click it and Unblock the Notifications