Search
  • Follow NativePlanet
Share
ಮುಖಪುಟ » ಸ್ಥಳಗಳು» ಮಾಪುಸಾ

ಮಾಪುಸಾ : ಸಂಸ್ಕೃತಿ ಸಂಪ್ರದಾಯಗಳ ಸಮ್ಮಿಲನ

10

ಉತ್ತರ ಗೋವಾದಲ್ಲಿ ನೆಲೆಸಿರುವ ಮಾಪುಸಾ ಪಟ್ಟಣವು ಬಾಗಾ, ಕಲಂಗುಟ್ ಮತ್ತು ಅಂಜುನಾ ಕಡಲ ತೀರಗಳಿಗೆ ಹತ್ತಿರದಲ್ಲಿದೆ. ಪಣಜಿಯಿಂದ ಕೇವಲ 13 ಕಿ.ಮೀ ದೂರದಲ್ಲಿರುವ ಈ ಪಟ್ಟಣವು, ಗೋವಾಗೆ ಭೇಟಿ ನೀಡಲು ಸೂಕ್ತ ಸಮಯವಾಗಿರುವ ಅಕ್ಟೋಬರ್ ನಿಂದ ಡಿಸೆಂಬರ್ ಕಾಲದಲ್ಲಿ ಪ್ರವಾಸಿಗರಿಗೆ ಒಂದು ಮಿತವ್ಯಯಕಾರಿಯಾದ ನಗರವೆಂದು ಹೇಳಬಹುದು. ಈ ನಗರವು ಪ್ರತಿ ಶುಕ್ರವಾರದಂದು ನಡೆಯುವ ಸಂತೆಗೆ ಪ್ರಖ್ಯಾತವಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳ ವ್ಯಾಪಾರಿಗಳು ಹಲವು ಬಗೆಯ ಕರಕುಶಲ ವಸ್ತುಗಳು, ಕೃಷಿ ಉತ್ಪನ್ನಗಳು, ತಾಜಾ ಹಣ್ಣುಗಳು ಮತ್ತು ಸ್ಥಳೀಯ ವಿವಿಧ ಬಗೆಯ ವಸ್ತುಗಳನ್ನು ಇಲ್ಲಿ ಮಾರುವುದನ್ನು ಕಾಣಬಹುದು. ಮಾಪುಸಾ ಪಟ್ಟಣವು ತನ್ನಲ್ಲಿ ದೊರೆಯುವ ವಿವಿಧ ಬಗೆಯ ಸಿಫುಡ್ ಗಳಿಗು ಖ್ಯಾತಿಯಾಗಿದೆ. ಪಣಜಿ ಹಾಗು ಗೋವಾದ ಇತರೆ ಭಾಗಗಳಿಂದ ಮಾಪುಸಾಗೆ ನಿರಂತರವಾದ ಬಸ್ ಸೇವೆಗಳು ಲಭ್ಯವಿದೆ. ಬೇಕಾದರೆ ಕ್ಯಾಬ್ ಗಳ ಸೇವೆಯನ್ನೂ ಕೂಡ ಬಳಸಬಹುದು, ಆದರೆ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ.

ಮಾಪುಸಾ ಪ್ರಸಿದ್ಧವಾಗಿದೆ

ಮಾಪುಸಾ ಹವಾಮಾನ

ಉತ್ತಮ ಸಮಯ ಮಾಪುಸಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಾಪುಸಾ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Sun
Return On
27 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Sun
Check Out
27 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Sun
Return On
27 Apr,Mon