Search
  • Follow NativePlanet
Share
ಮುಖಪುಟ » ಸ್ಥಳಗಳು» ಮಾಲ್ಡಾ

ಮಾಲ್ಡಾ - ಮಾವಿನ ಹಣ್ಣಿನ ನಗರ

10

ಮಾಲ್ಡಾ ನಗರವು ಇಂಗ್ಲೀಷ್ ಬಜಾರ್ ಅಥವ ಇಂಗ್ರಾಜ್ ಬಜಾರ್ ಅಥವ ಮಾವಿನ ಹಣ್ಣಿನ ನಗರವೆಂದು ಪ್ರಸಿದ್ಧಿ ಪಡೆದಿದೆ. ಪಶ್ಚಿಮ ಬಂಗಾಳದ ಉತ್ತರಭಾಗದಲ್ಲಿರುವ ಈ ನಗರವು ಡಾರ್ಜಿಲಿಂಗ್ ಮತ್ತು ಸಿಲಿಗುರಿಗಳಿಗೆ ಸಮೀಪದಲ್ಲಿದೆ.

ಮಾಲ್ಡಾ ಅಥವ ಮಾಲ್ಡ್ಹಾ ಇದು ಪಶ್ಚಿಮ ಬಂಗಾಳದ ದೊಡ್ಡ ನಗರಗಳಲ್ಲಿ ಒಂದು. ಈ ನಗರದ ಮತ್ತೊಂದು ವಿಶೇಷತೆಯೆಂದರೆ ಇಲ್ಲಿ ಮಹಿಳೆಯರಿಗಾಗಿಯೇ ಮೀಸಲಾದ ನ್ಯಾಯಾಲಯವಿದೆ. ಇದು ಮಹಾನಂದ ನದಿ ದಂಡೆಯಲ್ಲಿದೆ. ಇಲ್ಲಿನ ಉಷ್ಣವಲಯದ ಹವಾಮಾನವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಿಲಿಗುರಿ ಮತ್ತು ಡಾರ್ಜಿಲಿಂಗ್ಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಸುತ್ತಮುತ್ತಲ ಪ್ರವಾಸಿ ತಾಣಗಳು

ಮಾಲ್ಡಾ ಸಂಗ್ರಹಾಲಯವು ಪ್ರಸಿದ್ಧವಾದುದು. ಈ ನಗರವು ಉತ್ತರ್ ದಿನ್ಜಾಪುರ್, ದಕ್ಷಿಣ ದಿನ್ಜಾಪುರ, ಮುರ್ಶಿಾದಾಬಾದ್ ಮತ್ತು ತಾರಾಪೀಠಕ್ಕೆ ಸಮೀಪದಲ್ಲಿದೆ.

ಆಹಾರ ವಿಶೇಷತೆಗಳು

ಈ ನಗರದಲ್ಲಿ ಹಲವು ರೆಸ್ಟೊರೆಂಟುಗಳು ಮತ್ತು ತಿಂಡಿಗಳ ಅಂಗಡಿಗಳಿವೆ. ಇವು ಬಂಗಾಳಿ ವಿಶೇಷ ತಿಂಡಿಗಳ ಸ್ವಾದವನ್ನು ಉಣಬಡಿಸುತ್ತವೆ. ಮಾಲ್ಡಾ ನಗರದಲ್ಲಿ ವಿಮಾನ ನಿಲ್ದಾಣವಿದ್ದು ಈಗ ಸದ್ಯಕ್ಕೆ ಅದನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಸಿಲಿಗುರಿ, ಬಾಗ್ದೊರಾ ವಿಮಾನ ನಿಲ್ದಾಣಗಳಿಂದಲೂ ಸಿಲಿಗುರಿಗೆ ತಲುಪಬಹುದು.

ಹಬ್ಬಗಳು ಮತ್ತು ಜಾತ್ರೆಗಳು

ಮಾಲ್ಡಾದಲ್ಲಿ ಹಿಂದೂ ಮತ್ತು ಮುಸ್ಲಿಂ ಹಬ್ಬಗಳನ್ನು ಆಚರಿಸಲಾಗುತ್ತದೆ. ಇವುಗಳಲ್ಲಿ ದುರ್ಗಾ ಮತ್ತು ಕಾಳಿ ಪೂಜೆ, ಈದ್-ಉಲ್-ಫಿತರ್ ಮತ್ತು ಕ್ರಿಸ್ಮಸ್ಗಳು ಸೇರಿವೆ. ಹಬ್ಬದ ಸಮಯದಲ್ಲಿ ಈ ನಗರಕ್ಕೆ ಭೇಟಿ ನೀಡಿದರೆ ಹಬ್ಬದ ವಾತಾವರಣದ ಸವಿಯನ್ನು ಸವಿಯಬಹುದು. ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಮಾಲ್ಡಾವು ಭಾರತ ಮತ್ತು ಪಾಕಿಸ್ತಾನಗಳ ನಡುವೆ ವಿವಾದದ ಭೂಮಿಯಾಗಿತ್ತು.

ಹೋಗುವುದು ಹೇಗೆ?

ಮಾಲ್ಡಾವು ಗೌರ್ ಮತ್ತು ಪಂಡ್ವಾ ಎನ್ನುವ ಎರಡು ಮುಖ್ಯ ನಗರಗಳ ನಡುವೆಯಿದೆ. ಗೌರ್ ಫಿರೋಜ್ ಮಿನಾರ್ ಗೌರ್ನ ತವರು. ಮಾಲ್ಡಾ ನಗರವನ್ನು ಸುತ್ತಲು ಸೈಕಲ್ ರಿಕ್ಷಾ, ಆಟೋ ರಿಕ್ಷಾ ಮತ್ತು ಬಸ್ಸುಗಳನ್ನು ಬಳಸಿಕೊಳ್ಳಬಹುದು.

ಮಾಲ್ಡಾ ಪ್ರಸಿದ್ಧವಾಗಿದೆ

ಮಾಲ್ಡಾ ಹವಾಮಾನ

ಉತ್ತಮ ಸಮಯ ಮಾಲ್ಡಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಾಲ್ಡಾ

  • ರಸ್ತೆಯ ಮೂಲಕ
    ಮಾಲ್ಡಾವನ್ನು ಕೊಲ್ಕತ್ತಾದಿಂದ ರಾಷ್ಟ್ರೀಯ ಹೆದ್ದಾರಿ 34ರ ಮೂಲಕ ತಲುಪಬಹುದು. ಇದು 326 ಕಿಮೀಗಳ ಹಾದಿ. ಸಿಲಿಗುರಿಯಿಂದ ರಾಷ್ಟ್ರೀಯ ಹೆದ್ದಾರಿ34ರ ಮೂಲಕ ತಲುಪಬಹುದು. ಇದು 253ಕಿಮೀಗಳ ಹಾದಿ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಾಲ್ಡಾಕ್ಕೆ ಬರಲು ಸಿಲಿಗುರಿ ಅಥವ ಕೊಲ್ಕತ್ತಾ ರೈಲು ನಿಲ್ದಾಣಗಳನ್ನು ಬಳಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಾಲ್ಡಾಕ್ಕೆ ಸಮೀಪದ ವಿಮಾನ ನಿಲ್ದಾಣ ಸಿಲಿಗುರಿಯಲ್ಲಿದೆ. ಇಲ್ಲಿಗೆ ದೇಶೀಯ ಮತ್ತು ವಿದೇಶಿಯ ವಿಮಾನ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri