ಫ್ಯಾಂಟಸಿ ಪಾರ್ಕ್, ಮಲಂಪುಳಾದಲ್ಲಿನ ಮನೋರಂಜನಾ ಪಾರ್ಕ್ ಆಗಿದ್ದು ಉತ್ತರ ಕೇರಳದಲ್ಲಿ ಅತಿ ಹೆಚ್ಚು ಸಂದರ್ಶಿತ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. 1998 ರಲ್ಲಿ ಈ ಪಾರ್ಕ್ ಗೆ ಕೇರಳ ಪ್ರವಾಸೋದ್ಯಮ ಇಲಾಖೆಯು ನೀಡುವ ಅತ್ಯುತ್ತಮ ಪ್ರವಾಸೋದ್ಯಮ ಸ್ಥಳ ಎಂಬ ಸ್ಥಾನಮಾನ ಲಭಿಸಿದೆ. ನಿಯೋ ಟೆಕ್ ಅಮ್ಯೂಸ್ಮೆಂಟ್ಸ್ನ ಮತ್ತು ರೆಸಾರ್ಟ್ಸ್ (ಪಿ) ಲಿಮಿಟೆಡ್ ನವರು ಇದನ್ನು ವಿನ್ಯಾಸಗೊಳಿಸಿದ್ದಾರೆ.
ಇದು ಪಾಲಕ್ಕಾಡ್ ಪಟ್ಟಣದಿಂದ 10 ಕಿ.ಮೀ ದೂರದಲ್ಲಿದ್ದು, 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇದು ಒಂದು ದಿನದ ಪ್ರವಾಸಕ್ಕೆ, ಶಾಲಾ ಪಿಕ್ನಿಕ್ ಮತ್ತು ಕುಟುಂಬ ಪ್ರವಾಸಕ್ಕೆ ಯೋಗ್ಯವಾದ ತಾಣವಾಗಿದೆ. ಈ ಪಾರ್ಕ್ ಎಲ್ಲಾ ವಯಸ್ಸಿನ ಜನರಿಗೂ ಅನುಕೂಲಕರವಾಗಿದ್ದು ಭವ್ಯವಾದ ಗಾರ್ಡನ್, ಅದ್ಭುತ ನೀರಿನ ಕಾರಂಜಿಗಳು, ಐಸ್ ಕ್ರೀಮ್ ಅಂಗಡಿಗಳನ್ನು ಹೊಂದಿದೆ. ಓರಿಯಂಟಲ್ ಎಕ್ಸ್ಪ್ರೆಸ್ ರೈಲು, ವಾಟರ್ ಮೆರ್ರಿ ಗೊ ರೌಂಡ್, ಕುಟುಂಬಗಳಿಗೆ ಕಾರ್ಟ್, ಪೈರೇಟ್ ಬೋಟ್, ಮತ್ತು ಡ್ರಾಗನ್ ಕೋಸ್ಟರ್ ಮುಂತಾದ ಮನೋರಂಜನೆಗಳಿಗೆ ಇಲ್ಲಿ ಅವಕಾಶವಿದೆ. ಬ್ಯಾಟರಿ ಕಾರು ರೈಡ್, ವಾಟರ್, ಬೇಬಿ ರೈಲು ರೈಡ್ ಮತ್ತು ಮಿನಿ ಟೆಲಿ ಕಾಂಪ್ಯಾಕ್ಟ್ ಮಕ್ಕಳಿಗೆ ಸೂಕ್ತವಾಗಿದೆ. ಪಾರ್ಕ್ ನ ಜನಪ್ರಿಯತೆಯನ್ನು ಹೆಚ್ಚಿಸಲು ಇತ್ತೀಚೆಗೆ ತೆರೆಯಲಾದ ಡಿಜಿಟಲ್ ತಾರಾಲಯ ಮತ್ತು ವೆಟ್ ಪಾರ್ಕ್ ಕಾರಣವಾಗಿದೆ.


Click it and Unblock the Notifications