Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಂಪುಳಾ » ಹವಾಮಾನ

ಮಲಂಪುಳಾ ಹವಾಮಾನ

ಮಲಂಪುಳಾ ಭೇಟಿಗೆ  ಚಳಿಗಾಲವು ಸೂಕ್ತ ಸಮಯವಾಗಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ  ಅಂದರೆ  ಮಾನ್ಸೂನ್ ನಂತರ ಕೂಡ ಭೇಟಿ ನೀಡಬಹುದು. ಓಣಂ ಕೇರಳದ ಪ್ರಮುಖ ಹಬ್ಬವಾಗಿದ್ದು  ಭಾರೀ ಉತ್ಸವಗಳು  ನಡೆಯುತ್ತವೆ. ನವೆಂಬರ್ ಮತ್ತು ಜನವರಿಯಲ್ಲಿ  ಭೇಟಿ ನೀಡಿ ತನು ಮನವನ್ನು ತಣಿಸಿಕೊಳ್ಳಬಹುದು.

ಬೇಸಿಗೆಗಾಲ

ಮಲಂಪುಳಾಗೆ ಪಟ್ಟಣದಲ್ಲಿ ಬೇಸಿಗೆಯು ಅತ್ಯಂತ ಉಷ್ಣಾಂಶ ಮತ್ತು ತೀವ್ರತೆಯನ್ನು ಹೊಂದಿದ್ದು, ಮಾರ್ಚ್ ತಿಂಗಳಿನಿಂದ ಆರಂಭಗೊಂಡು ಮೇ ತನಕ ಇರುತ್ತದೆ. ಈ ಕಾಲದಲ್ಲಿ  45 ° ಸಿ ಗರಿಷ್ಠ ತಾಪಮಾನವಿದ್ದು, ಪ್ರವಾಸಿಗರ ಭೇಟಿಗೆ ಸೂಕ್ತವಲ್ಲ. 

ಮಳೆಗಾಲ

ಮಲಂಪುಳಾದಲ್ಲಿ ಮಳೆಗಾಲದ ಅವಧಿಯಲ್ಲಿ ಗಣನೀಯವಾಗಿ ಉತ್ತಮ ಮಳೆಯಾಗುತ್ತದೆ. ಮಾನ್ಸೂನ್, ಜೂನ್ ತಿಂಗಳಿಂದ ಆರಂಭವಾಗಿ ಸೆಪ್ಟೆಂಬರ್ ತನಕ ಮುಂದುವರೆಯುತ್ತದೆ. ಈ ಸಮಯದಲ್ಲಿ ಮಳೆಯ ತೀವ್ರತೆ ಅಧಿಕವಾಗಿದ್ದು, ನಿಲ್ಲದ ಮಳೆ ಅಣೆಕಟ್ಟು ಮತ್ತು ತೋಟಗಳ ವೀಕ್ಷಣೆಗೆ ಅಡ್ಡಿಯುಂಟುಮಾಡುತ್ತದೆಯಾದ್ದರಿಂದ ಪ್ರವಾಸಿಗರ ಭೇಟಿಗೆ ಈ ಕಾಲವು ಕೂಡ ಸೂಕ್ತವಲ್ಲವೆಂದೆ ಹೇಳಬಹುದು.

ಚಳಿಗಾಲ

ಮಲಂಪುಳಾವು ಚಳಿಗಾಲದಲ್ಲಿ ಆಹ್ಲಾದಕರ ಮತ್ತು ಸೌಮ್ಯವಾದ ಹವಾಗುಣ ಹೊಂದಿರುತ್ತದೆ. ಇಲ್ಲಿ  ಚಳಿಗಾಲವು ಡಿಸೆಂಬರ್ ನಿಂದ ಆರಂಭಗೊಂಡು ಫೆಬ್ರವರಿ  ತನಕ ಮುಂದುವರೆಯುತ್ತದೆ. ಚಳಿಗಾಲದಲ್ಲಿ ತಾಪಮಾನವು 20 ° C ನಿಂದ 32 ° ಸಿ ವರೆಗೆ ಇದ್ದು ಪ್ರವಾಸಿಗರ ಭೇಟಿಗೆ ಸೂಕ್ತ ಸಮಯವಾಗಿದೆ.