Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಂಪುಳಾ » ಆಕರ್ಷಣೆಗಳು » ಮಲಂಪುಳಾ ಉದ್ಯಾನ

ಮಲಂಪುಳಾ ಉದ್ಯಾನ, ಮಲಂಪುಳಾ

4

ಮಲಂಪುಳಾ ಉದ್ಯಾನ ಕೇರಳದ ವೃಂದಾವನ ಎಂದೂ ಜನಪ್ರಿಯವಾಗಿದೆ. ಪ್ರಕೃತಿಯ ಅದ್ಭುತ ಸೃಷ್ಟಿಯ ಜತೆಯಲ್ಲಿ ಮನುಷ್ಯನ ಸೃಜನಶೀಲತೆಯೂ ಬೆರೆತು, ಈ ಉದ್ಯಾನ ನಿರ್ಮಾಣವಾಗಿದೆ. ಜಲಾಶಯದ ಸಮೀಪವೇ ಇರುವುದರಿಂದ ಅನನ್ಯ ನೋಟವನ್ನು ಈ ಉದ್ಯಾನ ಒದಗಿಸುತ್ತದೆ.

ಸುಂದರ ಹೂವಿನ ಹಾಸಿಗೆಗಳು, ಭವ್ಯವಾದ ಕಾರಂಜಿಗಳು, ಅದ್ಭುತ ಕೆರೆ, ತೋಟವಿಡೀ ಹಬ್ಬಿಸಿದ ಐಷಾರಾಮೀ ಹುಲ್ಲಿನ ಹಾಸಿಗೆಗಳು ಸ್ವರ್ಗಸದೃಶ ನೋಟವನ್ನು ನೀಡುತ್ತವೆ. ವಿಶಾಲವಾದ ಆಟದ ಮೈದಾನ, ವಿಸ್ತಾರವಾದ ತೋಟ ಹಸಿರು ವೈಭವವನ್ನು ಉಣಬಡಿಸುತ್ತದೆ. ಮಕ್ಕಳ ಉದ್ಯಾನ, ಅಮ್ಯೂಸ್‌ಮೆಂಟ್‌ಗಳೂ ಇಲ್ಲಿ ಇರುವುದರಿಂದ ಮಕ್ಕಳ ಮನರಂಜನೆಗೂ ವಿಫುಲವಾದ ಅವಕಾಶ ಇದೆ.

ಈ ಉದ್ಯಾನದ ಇತರೆ ಆಕರ್ಷಣೆಗಳೆಂದರೆ  ಮತ್ಸ್ಯಾಗಾರ, ಹಗ್ಗದಮೇಲೆ ಚಲಿಸುವ ಭೋಗಿಗಳು, ಯಕ್ಷಿ ಪ್ರತಿಮೆ, ಬಂಡೆ ಉದ್ಯಾನ, ಗುಲಾಬಿ ತೋಟ, ಈಜುಕೊಳ ಮತ್ತು ಕಾರಂಜಿಗಳು.  ತೋಟದ ನಡುವೆಯೇ ಹಾದು ಹೋದ ಮಾನವನಿರ್ಮಿತ ಕಾಲುವೆಯಲ್ಲಿ ದೋಣಿವಿಹಾರಕ್ಕೂ ಅವಕಾಶವಿದೆ. ಉದ್ಯಾನದ ನಡುವೆ ನಿರ್ಮಿಸಿರುವ ದಾರಿಗಳ ಮೂಲಕ ನಡೆದಾಡತ್ತಾ, ಪೂರ್ಣ ಉದ್ಯಾನದ ನೋಟವನ್ನು ಆಹ್ಲಾದಿಸಬಹುದಾಗಿದೆ. ಇವುಗಳ ಜತೆ ಹಲವಾರು ಕಡೆ ಕುಡಿವ ನೀರಿನ ವ್ಯವಸ್ಥೆ, ವ್ಯಾಪಾರೀ ಮಳಿಗೆಗಳು, ಆಹಾರ ಮಳಿಗೆಗಳು ಇವೆ. ಭಧ್ರತಾ ವ್ಯವಸ್ಥೆಯೂ ಉತ್ತಮವಾಗಿರುವುದರಿಂದ ಬೆಲೆಬಾಳುವ ವಸ್ತುಗಳನ್ನು ನೀವು ಒಯ್ದಿದ್ದರೂ ಭಯಪಡುವ ಅಗತ್ಯವಿಲ್ಲ.

ಪ್ರತಿ ವಾರಾಂತ್ಯ ಹಾಗು ಇತರೆ ರಜೆ ದಿನಗಳಲ್ಲಿ ಉದ್ಯಾನವನ್ನು ರಾತ್ರಿ 7 ಗಂಟೆಯಿಂದ 8 ಗಂಟೆಯವರೆಗೆ ಬೆಳಗಿಸಲಾಗುತ್ತದೆ, ಹಾಗು ಈ ಸಮಯದಲ್ಲಿ ಸ್ಥಳವು ಒಂದು ಅದ್ಭುತ ನೋಟವನ್ನು ನೋಡುಗರಿಗೆ ಒದಗಿಸುತ್ತದೆ.

ಸಮಯಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿದಿನ

ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ವಾರಾಂತ್ಯಗಳಲ್ಲಿ

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat