ತೆಂಗಪಾನಿಯವನ್ನು ಬ್ರಹ್ಮಪುತ್ರ ನದಿ ದಡದ ಪಿಕ್ನಿಕ್ ತಾಣ ಎಂದು ಗುರುತಿಸಲಾಗಿದೆ.ಈ ಸುಂದರ ತಾಣವು ಮಜುಲಿಯ ಹತ್ತಿರವಿದ್ದು ,ಧಖೌಖಾನಾ,ಮಚ್ಕಾವೋ,ಮತ್ತು ದಿಸಂಗಮುಖ್ ಇವುಗಳಿಂದ ಸುತ್ತುವರೆದಿದೆ.ತೆಂಗಪಾನಿಯ ವರ್ಷಪೂರ್ತಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.ಬ್ರಹ್ಮಪುತ್ರಾ ನದಿಯ ಸೌಂದರ್ಯವನ್ನು ಸವಿಯಲು ತೆಂಗಪಾನಿಯ ಸೂಕ್ತ ಸ್ಥಳ.ಈ ಸುಂದರ ಸ್ಥಳವನ್ನು ಇಲ್ಲಿನ ಉತ್ತಮ ಪಿಕ್ನಿಕ್ ತಾಣ ಎನ್ನಬಹುದು.
ತೆಂಗಪಾನಿಯ ಸಿಬಸಾಗರ್ ನಗರಕ್ಕೆ ಹತ್ತಿರದ ಸ್ಥಳ ಎನ್ನಲಾಗಿದೆ.ಜೊತೆಗೆ ಈ ಸ್ಥಳ ಜೋರ್ಹತ್ ಮತ್ತು ಮಜುಲಿ ಎರಡಕ್ಕೂ ಹತ್ತಿರವಿರುವುದರಿಂದ ಪ್ರವಾಸಿಗರಿಗೆ ಒಂದೇ ದಿನದಲ್ಲಿ ಭೇಟಿ ನೀಡಲು ಅನುಕೂಲವಾಗುತ್ತದೆ. ತೆಂಗಪಾನಿಯ ತಲುಪಲು ಉತ್ತಮ ಮಾರ್ಗವೆಂದರೆ ಈ ಪಿಕ್ನಿಕ್ ಸ್ಥಳಕ್ಕೆ ಹತ್ತಿರವಿರುವ ಸಿಮಲ್ಗುರಿ ಜಂಕ್ಷನ್ ಮೂಲಕ ತಲುಪುವುದು.ಈ ರೈಲ್ವೆ ನಿಲ್ದಾಣದಿಂದ ತೆಂಗಪಾನಿಯ ತಲುಪುವುದು ಸುಲಭ.


Click it and Unblock the Notifications