Search
  • Follow NativePlanet
Share
ಮುಖಪುಟ » ಸ್ಥಳಗಳು » ಮಜುಲಿ » ಹವಾಮಾನ

ಮಜುಲಿ ಹವಾಮಾನ

ಚಳಿಗಾಲ ಮಜುಲಿಗೆ ಪ್ರವಾಸ ಕೈಗೊಳ್ಳಲು ಉತ್ತಮ ಕಾಲ.ಈ ಸಮಯದಲ್ಲಿ ವಾತಾವರಣ ಹಿತವಾಗಿರುತ್ತದೆ.ಬ್ರಹ್ಮಪುತ್ರ ನದಿ ಕೂಡ ಈ ಸಮಯದಲ್ಲಿ ಶಾಂತವಾಗಿರುವುದರಿಂದ ಫೆರ್ರಿ ಯಲ್ಲಿ ಹೋಗಲು ಕೂಡ ಸಮಸ್ಯೆ ಇರುವುದಿಲ್ಲ.ಚಳಿಗಾಲ ಮಜುಲಿಯ ಉಚ್ಚ ಪ್ರವಾಸೋದ್ಯಮ ಕಾಲ ಎಂದು ಪರಿಗಣಿಸಲಾಗಿದೆ.

ಬೇಸಿಗೆಗಾಲ

ಮಾರ್ಚ್ ನಿಂದ ಪ್ರಾರಂಭವಾದ ಬೇಸಿಗೆ ಮೇ ಯಲ್ಲಿ ಮುಗಿಯುತ್ತದೆ.ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ನಿಂದ 45 ರ ವರೆಗೂ ತಲುಪುತ್ತದೆ.ಬೇಸಿಗೆಯಲ್ಲಿ ಮಜುಲಿಯಲ್ಲಿ ಹೆಚ್ಚು ಬಿಸಿ ಮತ್ತು ಆರ್ದ್ರತೆ ಇರುತ್ತದೆ.ಮೇ ಮತ್ತು ಜೂನ್ ಅತಿ ಹೆಚ್ಚು ಕಷ್ಟಕರವಾದ ತಿಂಗಳು.

ಮಳೆಗಾಲ

ಜುಲೈ ನಿಂದ ಸೆಪ್ಟೆಂಬರ್ ಮಜುಲಿಯಲ್ಲಿ ಮಳೆಗಾಲ.ಇಲ್ಲಿ ಮಳೆಗಾಲದಲ್ಲಿ ಬರುವ ಸಾಮಾನ್ಯ ಸಮಸ್ಯೆ ಎಂದರೆ ಪ್ರವಾಹ.ದ್ವೀಪದ ಸಾಕಷ್ಟು ಭಾಗಗಳು ಈ ಸಮಯದಲ್ಲಿ ಮುಳುಗುತ್ತದೆ. ಮಳೆಗಾಲದಲ್ಲಿ ಈ ದ್ವೀಪ ಸುಂದರವಾಗಿ ಕಾಣುತ್ತದೆಯಾದರೂ ಈ ಸಮಯದಲ್ಲಿ ಇಲ್ಲಿಗೆ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ಮಜುಲಿಯಲ್ಲಿ ಚಳಿಗಾಲ ಆಹ್ಲಾದಕರವಾಗಿರುತ್ತದೆ.ಈ ಸಮಯದಲ್ಲಿ ಸರಾಸರಿ ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್ ನಿಂದ 18 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ.ಉಣ್ಣೆ ಬಟ್ಟೆ ಚಳಿಗಾಲಕ್ಕೆ ಸಾಕಾಗುತ್ತದೆ.ಮಳೆ ಕಡಿಮೆ ಆದ ನಂತರ ದ್ವೀಪ ಸುಂದರವಾಗಿ ಕಾಣಿಸುತ್ತದೆ.