ಕಮಲಾಬರಿ ಸತ್ರ ಮಜುಲಿಯಲ್ಲಿ ಹೆಸರುವಾಸಿಯಾದ ಸತ್ರ. ಈ ಮಜುಲಿ ಎಂಬ ದೊಡ್ಡ ದ್ವೀಪವು ಶ್ರೀಮಂತ ಶಂಕರ ದೇವ ಬೋಧಿಸಿದ ನಯೋ ವೈಶವಿನಿಯ ಕೇಂದ್ರವಾಗಿದೆ. ಅಸ್ಸಾಮಿ ಭಾಷೆಯಲ್ಲಿ ಕಮಲಾ ಎಂದರೆ ಕಿತ್ತಳೆ, ಬರಿ ಎಂದರೆ ಉದ್ಯಾನವನ ಎಂಬ ಅರ್ಥವಿದೆ. ಮಾದವದೇವರ ಶಿಷ್ಯರಾದ ಬದಲಾ ಅತ ದಿಂದ 1595 ರಲ್ಲಿ ಕಮಲಾಬರಿ ಸತ್ರ ಪ್ರಾರಂಭಿಸಲಾಯಿತು.
ಕಮಲಾಬರಿ ಸತ್ರವನ್ನು ಶತಮಾನಗಳಿಂದ ಕಲೆ, ಸಂಸ್ಕೃತಿ, ಸಾಹಿತ್ಯದ ಕೇಂದ್ರವಾಗಿ ಪರಿಗಣಿಸಲಾಗಿದೆ. ಕಮಲಾಬರಿ ಸತ್ರೀಯ ನೃತ್ಯವು ಜನಪ್ರಿಯತೆ ಪಡೆದ ನಂತರ ಶಾಸ್ತ್ರೀಯ ನೃತ್ಯ ರೂಪದ ಮನ್ನಣೆಯನ್ನು ಪಡೆಯಿತು.ಪ್ರತಿ ವರ್ಷ ಮಜುಲಿಗೆ ನುಗ್ಗುವ ಪ್ರವಾಹವು ಈ ಸತ್ರವನ್ನು ಹಾನಿ ಮಾಡುತ್ತವೆ.ಕಮಲಾಬರಿ ಸತ್ರ ಪೌರಾಣಿಕ ಶಿಲ್ಪಗಳನ್ನು ಕೆತ್ತುವಲ್ಲಿ ಕೂಡ ಹೆಸರುವಾಸಿಯಾಗಿದೆ.
ಕಮಲಾಬರಿ ಸತ್ರವನ್ನು ನೋಡಲು ಮಳೆಗಾಲ ಮುಗಿದು,ಪ್ರವಾಹಗಳು ಇಲ್ಲದ ಸಮಯ ಸೂಕ್ತ ಕಾಲ.ಪ್ರವಾಸಿಗರು ಜೋರ್ಹತ್ ನ ನಿಮತಿ ಘಾಟ್ ನಿಂದ ಫೆರ್ರಿ ಮೂಲಕ ಈ ಸತ್ರ ತಲುಪಬಹುದು.


Click it and Unblock the Notifications