ಮಜುಲಿಯಿಂದ 110 ಕಿ ಮೀ ಅಂತರದಲ್ಲಿರುವ ಚತಿಯಾ ಗಾಂವ್, ಉತ್ತರ ಲಕ್ಷ್ಮೀಪುರದಲ್ಲಿರುವ ಹೆಸರುವಾಸಿ ಪ್ರವಾಸಿ ಸ್ಥಳ. ಮಜುಲಿಗೆ ಭೇಟಿ ನೀಡಿದ ಪ್ರವಾಸಿಗರು ಚೆತಿಯ ಗಾಂವ್ ದ ಸುಬಂಸಿರಿ ನದಿಯ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಭೇಟಿ ನೀಡುತ್ತಾರೆ. ಸುಬಂಸಿರಿ ಬ್ರಹ್ಮಪುತ್ರವನ್ನು ನಂತರ ಅಸ್ಸಾಮಿನ ಅತಿ ದೊಡ್ಡ ನದಿ ಎನ್ನಬಹುದು. ಪ್ರಾಣಿ ಪಕ್ಷಿಗಳನ್ನು ನದಿಯ ಜೊತೆಗೆ ಸವಿಯುವ ಪ್ರಕೃತಿ ಸೌಂದರ್ಯ ಹೊಂದಿರುವ ಸ್ಥಳವಿದು. ಸುಬಂಸಿರಿ ನದಿ ವೇಗದ ಪ್ರವಾಹಕ್ಕೆ(ರಭಸಕ್ಕೆ) ಹೆಸರುವಾಸಿಯಾಗಿದ್ದು, ದೇಶದ ದೊಡ್ಡ ಹೈಡ್ರೋ ಪವರ್ ಯೋಜನೆಗಳು ಇದರ ಕೆಳಗೆ ನಡೆಯುತ್ತಿದೆ.
ಚೆತಿಯ ಗಾಂವ್ ಪ್ರವಾಸಿಗರಿಗೆ ಅಲ್ಲಿಂದ ಕಾಡು ಮತ್ತು ನದಿ ಪಕ್ಕದಲ್ಲಿ ಟ್ರೆಕ್ಕಿಂಗ್ ಮಾಡುವವರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಸ್ಥಳವು ಇತರ ಪ್ರವಾಸಿ ಪ್ರಸಿದ್ಧಿ ಸ್ಥಳಗಳಾದ ಗಂಗಾಮುಖ್ ಬರ್ದೊನಿ, ದಪಲಿಯಗವೊಂ, ದಖೌಖಾನ ಇವುಗಳಿಂದ ಸುತ್ತುವರೆದಿದೆ.ಇಲ್ಲಿನ ಸ್ಥಳೀಯ ತಿನಿಸುಗಳು ಗಮನ ಸೆಳೆಯುವಂತವಾದ್ದರಿಂದ ಅವುಗಳನ್ನು ತಿನ್ನಲು ಮರೆಯಬೇಡಿ.


Click it and Unblock the Notifications