Search
  • Follow NativePlanet
Share
ಮುಖಪುಟ » ಸ್ಥಳಗಳು» ಮಹಾಸಾಮುಂದ್

ಮಹಾಸಮುಂದ್ : ಈಶ್ವರನ ದೇವಾಲಯಗಳ ಸ್ಥಳ

9

ಮಹಾಸಮುಂದ್ ಪಟ್ಟಣವು ಚತ್ತೀಸ್‍ಘಡ್ ರಾಜ್ಯದಲ್ಲಿರುವ ಮಹಾಸಮುಂದ್ ಜಿಲ್ಲೆಯಲ್ಲಿದೆ. ಇದು ಚತ್ತಿಸ್‍ಘಡ್ಡಿನ ಮಧ್ಯ-ಪೂರ್ವ ಭಾಗದ ಪ್ರದೇಶವಾಗಿದೆ. ಮಹಾಸಮುಂದ್  ದಕ್ಷಿಣ ಕೋಸಲ ರಾಜ್ಯದ ಸೋಮವಂಶೀಯ ಚಕ್ರವರ್ತಿಗಳ ಆಳ್ವಿಕೆಯಲ್ಲಿ ರಾಜಧಾನಿಯಾಗಿದ್ದು ಕಲಿಕೆಯ ಕೇಂದ್ರವಾಗಿತ್ತು ಮತ್ತು ತನ್ನ ಸಾಂಪ್ರದಾಯಿಕ ಹಿನ್ನೆಲೆಗೆ ಹೆಸರುವಾಸಿಯಾಗಿದೆ.  

ಸೋಮವಂಶೀಯ ಚಕ್ರವರ್ತಿಗಳ ಸಮಯದಲ್ಲಿ ಶ್ರೀಪುರ್ ಎಂದು ಕರೆಯಲಾಗಿದ್ದ ಇದನ್ನು ಕ್ರಮೇಣ ಸಿರ್‌ಪುರ್ ಎಂದು ಕರೆಯಲಾಗಿದೆ. ಇದು ಸಾಂಸ್ಕೃತಿಕ ಕೇಂದ್ರವಾಗಿರುವುದರಿಂದ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ವರ್ಷಪೂರ್ತಿ ಆಕರ್ಷಿಸುತ್ತದೆ. ಇದು ಪವಿತ್ರ ಮಹಾನದಿ ತೀರದಲ್ಲಿದೆ. ಈ ಪ್ರದೇಶದಲ್ಲಿ ಸುಣ್ಣದ ಮತ್ತು ಗ್ರಾನೈಟ್ ಬಂಡೆಗಳು ಸಮೃದ್ಧಿಯಾಗಿವೆ.

ಮಹಾಸಮುಂದ್ ಸಂಸ್ಕೃತಿ

ಹಲ್ಬಾ, ಮುಂಡಾ, ಸೋನಾರ್, ಸನ್ವಾರ, ಪರ್ಧಿ, ಬಹಾಲಿಯ, ಇತ್ಯಾದಿ ಬುಡಕಟ್ಟಿನ ಜನರು ಇಲ್ಲಿ ನೆಲೆಸಿದ್ದಾರೆ.  ಬುಡಕಟ್ಟು ಸಂಸ್ಕೃತಿ, ಬುಡಕಟ್ಟು ಜಾತ್ರೆಗಳು ಮತ್ತು ಉತ್ಸವಗಳು ಇಲ್ಲಿನ ಜನರ ದೈನಂದಿನ ಜೀವನದ ಒಂದು ಭಾಗವಾಗಿದೆ. ಪುರುಷರು ಧೊತಿ, ಕುರ್ತಾ, ಪೇಟ ಮತ್ತು ಭಾಂಡೈ ಎಂಬ ಚರ್ಮದ ಪಾದರಕ್ಷೆ ಹಾಗೂ ಮಹಿಳೆಯರು ಸೀರೆಗಳು ಇಲ್ಲಿನ ಜನರ ಸಾಂಪ್ರದಾಯಿಕ ಶೈಲಿಯ ಉಡುಪುಗಳಾಗಿವೆ.

ಅಟ್ಕಾರಿಯ ಎಂಬುದು ಒಂದು ಸಾಂಪ್ರದಾಯಿಕ ಪಾದರಕ್ಷೆಯಾಗಿದೆ. ಮಹಿಳೆಯರು ಬಿಚಿಯಾ, ಕರ್ಧಾನ್ ಅಥವಾ ಸೊಂಟದ ಬ್ಯಾಂಡ್, ಪರ‍್ಪಟ್ಟಿ ಅಥವಾ ಕೋನಾಕಾರದ ಬ್ಯಾಂಡ್, ಫುಲೀ ಅಥವಾ ಬೆಳ್ಳಿ ಕಿವಿಯೋಲೆಗಳು ಹೀಗೆ ವಿವಿಧ ರೀತಿಯ ಆಭರಣಗಳನ್ನು ಧರಿಸುತ್ತಾರೆ. ಹಬ್ಬಗಳ ಆಚರಣೆಯು ತಮ್ಮ ಜೀವನದ ಒಂದು ಪ್ರಮುಖ ಭಾಗವಾಗಿ ಹೋಗಿದೆ.  

ಮಹಾಸಮುಂದ್ ಸುತ್ತಮುತ್ತ ಇರುವ ಪ್ರವಾಸಿ ಸ್ಥಳಗಳು

ಮಹಾಸಮುಂದಿನ ಪ್ರಮುಖ ಪ್ರವಾಸೀ ಆಕರ್ಷಣೆಗಳೆಂದರೆ ಲಕ್ಷ್ಮಣ್ ದೇವಾಲಯ, ಆನಂದ್ ಪ್ರಭು ಕುಡಿ ವಿಹಾರ್, ಭಾಂಹಿನಿಯ ಸ್ವೇತ್ ಗಂಗ, ಖಲ್ಲಾರಿಮಾತ ದೇವಾಲಯ, ಘೌಧಾರ(ದಲ್‍ದಲಿ), ಚಂಡಿ ದೇವಾಲಯ(ಗುಚ್ಚಪಳಿ), ಸ್ವಸ್ತಿಕ್ ವಿಹಾರ್, ಗಾಂಧೇಶ್ವರ್ ದೇವಾಲಯಗಳು.

ಮಹಾಸಾಮುಂದ್ ಪ್ರಸಿದ್ಧವಾಗಿದೆ

ಮಹಾಸಾಮುಂದ್ ಹವಾಮಾನ

ಉತ್ತಮ ಸಮಯ ಮಹಾಸಾಮುಂದ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಹಾಸಾಮುಂದ್

  • ರಸ್ತೆಯ ಮೂಲಕ
    ಮಹಾಸಮುಂದ್ ಪಟ್ಟಣಕ್ಕೆ ರಾಯ್‍ಪೂರಿನಿಂದ ಬಸ್‍ಗಳು ನಿಯಮಿತವಾಗಿ ಲಭ್ಯವಾಗುತ್ತದೆ. ರಾಯ್‍ಪೂರಿನಿಂದ ಸುಮಾರು 53 ಕಿ,ಮೀ. ದೂರವನ್ನು ಬಸ್ ಮೂಲಕ ಪ್ರಯಾಣಮಾಡುವುದು ಸುಲಭ ಮತ್ತು ಒಳ್ಳೆಯದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹತ್ತಿರದ ರೈಲು ನಿಲ್ದಾಣವು ರಾಯ್‍ಪೂರಿನಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವು ರಾಯ್‍ಪೂರಿನಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed