Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ಅಥಿಸಯಮ್ ಥೀಮ್ ಪಾರ್ಕ್

ಅಥಿಸಯಮ್ ಥೀಮ್ ಪಾರ್ಕ್, ಮದುರೈ

1

ಮಧುರೈ ನಗರದಿಂದ 5 ಕೀ.ಮಿ ದೂರದಲ್ಲಿ ನೀವು ಅಥಿಸಯಮ್ ಥೀಮ್ ಪಾರ್ಕ್ ಅನ್ನು ನೋಡಬಹುದು. ಪರಾವೈ ಬಳಿ ಇರುವ ಮಧುರೈ ದಿಂಡಿಗಲ್  ರಾಷ್ಟ್ರೀಯ ಹೆದ್ದಾರಿಯಲ್ಲಿ ನೀವು ಈ ಪಾರ್ಕನ್ನು ನೋಡಬಹುದು. ಸುಮಾರು 70 ಎಕರೆ ಪ್ರದೇಶದಲ್ಲಿ ಈ ಪಾರ್ಕನ್ನು ನಿರ್ಮಿಸಲಾಗಿದೆ. ಅಥಿಸಯಂ ಥೀಮ್ ಪಾರ್ಕ 40 ಬಗೆಯ ಜಲಕ್ರೀಡೆಗಳು ಮತ್ತು 20 ಬಗೆಯ ಜಲ ಮೋಜು ಸವಾರಿಗಳನ್ನು ಒಳಗೊಂಡಿದೆ.

ಜಲಕ್ರೀಡೆಗಳು ಮತ್ತು ಜಲ ಮೋಜು ಸವಾರಿಗಳು ಈ ಪಾರ್ಕಿನ ಪ್ರಮುಖ ಮತ್ತು ಅನನ್ಯ ಆಕರ್ಷಣೆ ಮತ್ತು ಲಕ್ಷಣವಾಗಿದೆ.ಕುರ್ತಾಲಮ ಜಲಪಾತದ ತರಹ ಇಲ್ಲಿನ ವಾಟರ್ ರೈಡ್ಸಗಳನ್ನು ಸೃಷ್ಟಿಸಲಾಗಿದೆ. ಈ ಸುಂದರವಾದ ಪಾರ್ಕನ್ನು 2000 ನೇ ವರ್ಷದಲ್ಲಿ ನಿರ್ಮಿಸಲಾಯಿತು. ಇದನ್ನು ಇಂಡಿಯನ್ ಥೀಮ್ ಪಾರ್ಕಗಳ ರಾಣಿ ಎಂದು ಬಹು ಪ್ರೀತಿಯಿಂದ ಕರೆಯುತ್ತಾರೆ. ಪರಿಶುದ್ಧ ಸಂಪೂರ್ಣ ಕೌಟುಂಬಿಕ ಮನೋರಂಜನೆಗಾಗಿಯೇ ಈ ಪಾರ್ಕನ್ನು ನಿರ್ಮಿಸಲಾಗಿದೆ.

ಈ ಪಾರ್ಕಿನ ಪ್ರವೇಶದಲ್ಲಿಯೇ ನಿಮಗೆ ಶೋವರ್ ನ ಅನುಭವವಾಗುತ್ತದೆ. ಇನ್ನು ಒಳಗಡೆ ಹೋದಂತೆ ವಿವಿಧ ವಿಸ್ಮಯಗಳನ್ನು ನೀವು ಕಾಣಬಹುದು. ಸಿಂಧುಬಾತ್,ಬಿಗ್ ಸ್ಪ್ಲಾಶ,ವೇವ್ ಪೂಲ್ ಮತ್ತು ಲೇಝಿರಿವರ್ ಹೀಗೆ ವಿಚಿತ್ರ ಹೆಸರುಗಳುಳ್ಳ ವಿವಿಧ ಜಲ ಆಕರ್ಷಣೆಗಳನ್ನು ನೀವು ಇಲ್ಲಿ ನೋಡಬಹುದು. ಕೋಲಂಬಸ್, ಸ್ವಿಂಗ್ ಚೇರ್, ಬಾಬ್ಬಿ ಟ್ರೇನ್, ಡ್ಯಾಶಿಂಗ ಕಾರ್, ಸೈನ್ಸ್ ಪಾರ್ಕ್ ಮುಂತಾದ ಮೋಜು ಸವಾರಿ ಮತ್ತು ಆಕರ್ಷಣೆಗಳನ್ನು ಈ ಪಾರ್ಕ ಹೊಂದಿದೆ.

ಇಲ್ಲಿ ಭೇಟಿ ನೀಡುವುದರಿಂದ ಸಂತೋಷ ಮತ್ತು ಅನಿಯಮಿತ ಮೋಜು ನಿಮ್ಮದಾಗುತ್ತದೆ. ಇಲ್ಲಿನ ಸಾಹಸಮಯ ಜಲಕ್ರೀಡೆಗಳು ನಿಮ್ಮನ್ನು ಖಂಡಿತವಾಗಿಯೂ ಉತ್ಸಾಹದ ಬುಗ್ಗೆಯನ್ನಾಗಿಸುತ್ತವೆ. ಇಂತಹ ಜಲಕ್ರೀಡೆಗಳ ಕುರಿತು ನಿಮ್ಮಲ್ಲಿ ಆಸಕ್ತಿ ಹುಟ್ಟುವಂತೆ ಮಾಡುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed