ಗುರು ನಾನಕ್ ಸ್ಟೇಡಿಯಂ, ಲುಧಿಯಾನಾ

ಮುಖಪುಟ » ಸ್ಥಳಗಳು » ಲುಧಿಯಾನಾ » ಆಕರ್ಷಣೆಗಳು » ಗುರು ನಾನಕ್ ಸ್ಟೇಡಿಯಂ

ಸುಮಾರು 1500 ಮಂದಿಗೆ ಆಸನದ ವ್ಯವಸ್ಥೆಯಿರುವ ಗುರು ನಾನಕ್ ಸ್ಟೇಡಿಯಂನನ್ನು ಸರಿಸುಮಾರು 15.4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವ ಈ ಸ್ಟೇಡಿಯಂನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ನಡೆಯುತ್ತದೆ. 2001ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಮತ್ತು ಸಮಾರೋಪ  ಸಮಾರಂಭವನ್ನು ಆಯೋಜಿಸಿತ್ತು. ಕಬಡ್ಡಿ ವಿಶ್ವಕಪ್ ಇದೇ ಸ್ಟೇಡಿಯಂನಲ್ಲಿ ನಡೆದಿದೆ ಮತ್ತು ಕತ್ರೀನಾ ಕೈಫ್ ಅವರಂತಹ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಲುಧಿಯನ್ವಿಸ್ ನ ಪ್ರತಿಷ್ಠೆ ಯಾಗಿ ಉತ್ತಮವಾಗಿ ನಿರ್ವಹಣೆ ಮಾಡಿರುವ ಫುಟ್ಬಾಲ್ ಮೈದಾನವಿದೆ ಮತ್ತು ಇದರಲ್ಲಿ ರಾಷ್ಟ್ರೀಯ ಫುಟ್ಬಾಲ್ ಲೀಗ್(ಎನ್ ಎಫ್ ಎಲ್) ಪಂದ್ಯಗಳು ನಡೆಯುತ್ತದೆ. ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಕಾಂಪ್ಲೆಕ್ಸ್ ನಲ್ಲಿ ಹಲವಾರು ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಹ್ಯಾಂಡ್ ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್ ಮತ್ತು ಟೇಬಲ್ ಟೆನಿಸ್ ಕ್ರೀಡಾಕೂಟಗಳು ನಡೆಯುತ್ತದೆ.

Please Wait while comments are loading...