ಲಾನ್ಸ್ ಡೌನ್ ನಲ್ಲಿರುವ ತಾರ್ಕೇಶ್ವರ ಮಹಾದೇವ ದೇವಾಲಯವು, ಸಮುದ್ರ ಮಟ್ಟದಿಂದ 2092 ಮೀಟರ್ ಎತ್ತರದ ಮೇಲೆ ಬೆಟ್ಟದ ತುದಿಯಲ್ಲಿ ನೆಲೆಸಿರುವ ಹೆಸರಾಂತ ದೇವಾಲಯ. ಈ ದೇವಾಲಯದಲ್ಲಿ ಹಿಂದೂ ದೇವತೆ ಶಿವನನ್ನು ಪೂಜಿಸಲಾಗುತ್ತದೆ ಮತ್ತು ಅನೇಕ ಭಕ್ತರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಜನರು ಇಲ್ಲಿ ಮಾಡುದ ಪ್ರಾರ್ಥನೆಗಳು ಯಾವಾಗಲೂ ಫಲಿಸುತ್ತವೆ ಎಂದು ನಂಬಲಾಗಿದೆ. ಹಿಂದೂ ಹಬ್ಬ, ಮಹಾಶಿವರಾತ್ರಿಯನ್ನು ಹೆಚ್ಚು ವಿಜೃಂಭಣೆ ಮತ್ತು ಧಾರ್ಮಿಕ ಅತ್ಯುತ್ಸಾಹದಿಂದ ವಾರ್ಷಿಕವಾಗಿ ಇಲ್ಲಿ ಆಚರಿಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಸಮೃದ್ಧ ಹಸಿರು ಪೈನ್, ಓಕ್ ಮತ್ತು ದೇವದಾರು ಕಾಡುಗಳು ಸುತ್ತುವರಿದಿವೆ. ಹಲವಾರು ಸಣ್ಣ ನಿರಂತರವಾಗಿ ಹರಿಯುವ ನೀರಿನ ತೊರೆಗಳು/ಕೊಳಗಳು ಕೂಡಾ ಇಲ್ಲಿವೆ.


Click it and Unblock the Notifications