ಕುಮರಕೊಮ್ ಪಕ್ಷಿ ಧಾಮ ಅಥವಾ ವೆಂಬನಾಡ್ ಪಕ್ಷಿಧಾಮವು ವೆಂಬನಾಡ್ ಸರೋವರದ ಪೂರ್ವಭಾಗದಲ್ಲಿ ನೆಲೆಗೊಂಡಿದೆ. ಹಿನ್ನೀರಿನ ಹಿನ್ನಲೆಯನ್ನು ಹೊಂದಿರುವ ಈ ಪಕ್ಷಿಧಾಮವು ಮಂತ್ರ ಮುಗ್ಧಗೊಳಿಸುವಂತಹ ತಾಣವಾಗಿದೆ. ಈ ಪಕ್ಷಿಧಾಮವು ನೂರಾರು ವಲಸೆ ಹಕ್ಕಿಗಳಿಗೆ ತಾತ್ಕಾಲಿಕವಾಗಿ ಆಶ್ರಯವನ್ನು ಕಲ್ಪಿಸುತ್ತದೆ. ಇದು ಪಕ್ಷಿತಙ್ಞರು ಮತ್ತು ಪಕ್ಷಿ ವೀಕ್ಷಕರಿಗೆ ಸ್ವರ್ಗ ಸದೃಶ್ಯವಾದ ತಾಣವಾಗಿದೆ.
ಈ ಪಕ್ಷಿಧಾಮವು ಸುಮಾರು 14 ಎಕರೆಗಳಷ್ಟು ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿಗೆ ಪಕ್ಷಿಗಳು ಹಿಮಾಲಯ ಮತ್ತು ಸೈಬೀರಿಯಾಗಳಷ್ಟು ದೂರದಿಂದ ಆಗಮಿಸುತ್ತಿರುತ್ತವೆ. ಕೋಗಿಲೆ , ನೀರು ಕೋಳಿ, ಕೊಕ್ಕರೆ, ಕಾರ್ಮೊರಂಟ್, ಗೂಬೆ, ಟೀಲ್, ರಾಜಹಂಸಗಳು, ಎಗ್ರೆಟ್, ಮೂರ್ ಕೋಳಿ, ಸೈಬೀರಿಯನ್ ಕೊಕ್ಕರೆ, ಡಾರ್ಟರ್, ಬ್ರಾಹ್ಮಣಿ ಗಿಡುಗ, ಗಿಳಿ ಮತ್ತು ನೊಣ ಹಿಡುಕದಂತಹ ಪಕ್ಷಿಗಳು ಇಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಸೂರ್ಯಾಸ್ತ ಅಥವಾ ಸೂರ್ಯೋದಯ ಸಮಯದಲ್ಲಿ ಒಂದು ನಡಿಗೆಯನ್ನು ಕೈಗೊಂಡರೆ ಸಾಕು , ಪ್ರಶಾಂತವಾದ ಆಕಾಶದ ಹಿನ್ನಲೆಯಲ್ಲಿ ಸಹಸ್ರಾರು ಪಕ್ಷಿಗಳು ಹಾರಾಡುವ ವರ್ಣಿಸಲಾಸಾಧ್ಯವಾದ ಸುಂದರವಾದ ದೃಶ್ಯವನ್ನು ಕಾಣಬಹುದು. ಈ ಪಕ್ಷಿಧಾಮದಲ್ಲಿ ಪಕ್ಷಿ ವೀಕ್ಷಣೆ ಮಾಡಲು ಪ್ರವಾಸಿಗರಿಗಾಗಿ ದೋಣಿಗಳು ( ದೋಣಿ ಮನೆಗಳು ಮತ್ತು ಯಾಂತ್ರಿಕೃತ ದೋಣಿಗಳು) ಮತ್ತು ಮಾರ್ಗದರ್ಶಿಗಳು ದೊರೆಯುತ್ತಾರೆ.
ಹೆಚ್ಚಿನ ಮಾಹಿತಿಗಳುಸಮಯ: ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಪ್ರವೇಶಾವಕಾಶವಿದೆ.
ಪ್ರವೇಶ ದರ : 5 ರೂಪಾಯಿ( ಭಾರತೀಯರಿಗೆ), 45 ರೂಪಾಯಿ ( ವಿದೇಶಿಯರಿಗೆ)
ಮಾರ್ಗದರ್ಶಿಗಳಿಗೆ : 100- 200 ರೂಪಾಯಿ
ದೋಣಿ ಯಾನ : 200 – 250 ರೂಪಾಯಿ ( ಎರಡು ಗಂಟೆಗಳಿಗೆ)
ಭೇಟಿ ಕೊಡಲು ಅತ್ಯುತ್ತಮ ಅವಧಿ : ನವೆಂಬರ್ ನಿಂದ ಫೆಬ್ರವರಿ
ದಿನದ ಯಾವ ಸಮಯ ಒಳ್ಳೆಯದು : ಮುಂಜಾನೆ, ಮುಸ್ಸಂಜೆ


Click it and Unblock the Notifications