Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ಪತಿರಮನ್ನಲ್

ಪತಿರಮನ್ನಲ್, ಕುಮರಕೊಮ್

1

ಪತಿರಮನ್ನಲ್ ಎಂಬುದು ಕುಮರಕೊಮ್ ಸಮೀಪದ ಒಂದು ಸುಂದರವಾದ ದ್ವೀಪವಾಗಿದೆ. ಇದು ಆನಂದ ಪದ್ಮನಾಭನ್ ತೊಪ್ಪು ಮತ್ತು ಪಾತಿರ ತೊಪ್ಪು ಎಂಬ ಹೆಸರುಗಳಿಂದಲು ಚಿರಪರಿಚಿತವಾಗಿದೆ. ವೆಂಬನಾಡ್ ಸರೋವರದ ನಡುವೆ ನೆಲೆಗೊಂಡಿರುವ ಈ ನಯನ ಮನೋಹರವಾದ ದ್ವೀಪವು ಸುಮಾರು 10 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಕೊಟ್ಟಾಯಂ ಮತ್ತು ಅಲೆಪ್ಪಿ ಜಿಲ್ಲೆಗಳ ಗಡಿಗೆ ಹೊಂದಿಕೊಂಡಿರುವ ಈ ದ್ವೀಪಕ್ಕೆ, ಕುಮರಕೊಮಿನಿಂದ ದೋಣಿ ಮೂಲಕ ತಲುಪಬಹುದು.

ಈ ದ್ವೀಪಕ್ಕೆ ಹಿನ್ನೀರಿನ ಹಿನ್ನಲೆಯಲ್ಲಿ ಸಾಗುವ ಪಯಣವು ಎಂತಹವರನ್ನು ಸಹ ಮಂತ್ರಮುಗ್ಧಗೊಳಿಸುತ್ತದೆ. ಅಲ್ಲದೆ ಈ ದ್ವೀಪವು ತಾತ್ಕಲಿಕವಾಗಿ ಸುಮಾರು 50 ಜಾತಿಯ ವಲಸೆ ಹಕ್ಕಿಗಳಿಗೆ ಆಶ್ರಯವನ್ನು ನೀಡುತ್ತದೆ. ಇದರ ಜೊತೆಗೆ 91 ಬಗೆಯ ಸ್ಥಳೀಯ ಹಕ್ಕಿಗಳ ಪ್ರಭೇದವನ್ನು ಇಲ್ಲಿ ಗುರುತಿಸಲಾಗಿದೆ.

ಈ ಹಚ್ಚ ಹಸಿರಿನಿಂದ ಕೂಡಿದ ದ್ವೀಪವು ತನ್ನ ಶ್ವೇತ ವರ್ಣದ ಮರಳಿನಿಂದ, ನಿಶ್ಕಲ್ಮಷವಾದ ಸೌಂದರ್ಯದಿಂದ ಮತ್ತು ಪ್ರಶಾಂತವಾದ ವಾತಾವರಣದಿಂದಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಜನವಸತಿಯಿಲ್ಲದ ಈ ಸಣ್ಣ ದ್ವೀಪವು ತನ್ನ ಶಾಂತತೆಯಿಂದಾಗಿ ಪರಿಸರ ಅದ್ಭುತವನ್ನು ಸವಿಯುವ ಅವಕಾಶವನ್ನು ನೀಡುತ್ತಿದೆ. ಯಾರು ಛಾಯಗ್ರಹಣದಲ್ಲಿ ಆಸಕ್ತಿ ಹೊಂದಿರುತ್ತಾರೋ , ಅವರಿಗೆ ಈ ದ್ವೀಪವು ಪ್ರತಿಕೋನದಲ್ಲಿಯು ಸೌಂದರ್ಯವನ್ನು ಒದಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat