Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ಅರುವಿಕ್ಕುಳಿ ಜಲಪಾತ

ಅರುವಿಕ್ಕುಳಿ ಜಲಪಾತ, ಕುಮರಕೊಮ್

1

ಅರುವಿಕ್ಕುಳಿ ಜಲಪಾತವು ತನ್ನ ಸಹಜ ಸೌಂದರ್ಯದಿಂದ ನೋಡುಗರನ್ನು ಸೆಳೆಯುವ ಒಂದು ಸುಂದರ ಜಲಪಾತವಾಗಿದೆ. ಇದು ಕುಮರಕೊಮಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಜಲಪಾತಕ್ಕೆ ಇಲ್ಲಿಂದ 18 ಕಿ.ಮೀ ದೂರದಲ್ಲಿರುವ ಕೊಟ್ಟಾಯಂನಿಂದ ಸುಲಭವಾಗಿ ತಲುಪಬಹುದು. ಈ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಕುಮರಕೊಮಿನ ಮೂಲಕ ಪ್ರವಾಸಿಗರು ಆಗಮಿಸುತ್ತಿರುತ್ತಾರೆ.  ಈ ಪ್ರಾಂತ್ಯವು ಸುಮ್ಮನೆ ಸುತ್ತಾಡಲು ಮತ್ತು ಪರಿಸರ ವೀಕ್ಷಣೆಗೆ ಅತ್ಯಂತ ಅನುಕೂಲಕರವಾಗಿದೆ.

ಇಲ್ಲಿನ ಜಲಧಾರೆಯು ಸುಮಾರು 100 ಅಡಿಗಳಷ್ಟು ಎತ್ತರದಿಂದ , ಕಲ್ಲುಬಂಡೆಗಳ ಎಡೆಯಿಂದ ಧುಮ್ಮಿಕ್ಕುವ ರೀತಿಯು ಪ್ರವಾಸಿಗರನ್ನು ಮೂಕವಿಸ್ಮಿತಗೊಳಿಸುತ್ತದೆ. ಈ ಜಲಪಾತವು ಅಸಂಖ್ಯಾತ ರಬ್ಬರ್ ತೋಟಗಳ ನಡುವೆ ನೆಲೆಗೊಂಡಿದ್ದು, ಕೌಟುಂಬಿಕ ವಿಹಾರಗಳಿಗೆ ಹೇಳಿಮಾಡಿಸಿದ ತಾಣವಾಗಿದೆ.ತನ್ನ ನಿಶ್ಕಲ್ಮಷವಾದ ಸೌಂದರ್ಯದಿಂದಾಗಿ ಈ ಪ್ರಾಂತ್ಯವು ಪರಿಸರ ಪ್ರೇಮಿಗಳಿಗೆ ಮತ್ತು ಛಾಯಾಗ್ರಹಕರಿಬ್ಬರಿಗು ರಸದೌತಣವನ್ನೊದಗಿಸುತ್ತದೆ.

ಅರುವಿಕ್ಕುಳಿ ಜಲಪಾತವು ಕುಮರಕೊಮ್ ಪಟ್ಟಣದಿಂದ ಕಾಲ್ನಡಿಗೆಯಲ್ಲಿ ತಲುಪಬಹುದಾದಷ್ಟು ದೂರದಲ್ಲಿದೆ. ಈ ಜಲಧಾರೆಯ ಸದ್ದನ್ನು ಪ್ರವಾಸಿಗರು ಮೈಲುಗಟ್ಟಲೆ ದೂರದಿಂದಲೆ ಕೇಳಬಹುದು. ಮಳೆಗಾಲದ ವರ್ಷಧಾರೆಯು ಈ ಜಲಪಾತವನ್ನು ಅತ್ಯಂತ ಶುಭ್ರಗೊಳಿಸುತ್ತವೆ. ಈ ಜಲಪಾತಕ್ಕೆ ಮಳೆಗಾಲದ ನಂತರ ಮತ್ತು ಬೇಸಿಗೆಗೆ ಮುಂದಿನ ಕಾಲದಲ್ಲಿ ಭೇಟಿ ಕೊಡುವುದು ಉತ್ತಮ ( ಅಂದರೆ ಸೆಪ್ಟೆಂಬರ್ ನಿಂದ ಫೆಬ್ರವರಿ).

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat