Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ಕುಮರಕೊಮ್ ಹಿನ್ನೀರು

ಕುಮರಕೊಮ್ ಹಿನ್ನೀರು, ಕುಮರಕೊಮ್

4

ಕುಮರಕೊಮ್ ಹಿನ್ನೀರು ಎಂಬುದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಪ್ರಶಾಂತವಾದ ಸರೋವರಗಳು ಮತ್ತು ಹಚ್ಚ ಹಸಿರಿನಿಂದ ಕೂಡಿದ ವೃಕ್ಷ ಸಮೂಹಗಳೆಲ್ಲವು ಸೇರಿ ಇಲ್ಲಿನ ಹಿನ್ನೀರಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಲ್ಲದೆ, ಈ ಪ್ರದೇಶವನ್ನು ಅತ್ಯಂತ ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾರ್ಪಾಡುಗೊಳಿಸಿವೆ.

ಒಂದು ದೋಣಿ ಮನೆಯನ್ನು ಬಾಡಿಗೆಗೆ ಪಡೆಯುವ ಮೂಲಕ ಕುಮರಕೊಮಿನ ಹಿನ್ನೀರಿನ ಸೌಂದರ್ಯವನ್ನು ಆಸ್ವಾದಿಸಬಹುದು. ಪ್ರವಾಸಿಗರು ಇಲ್ಲಿನ ಕಾಲುವೆಗಳು, ಸರೋವರಗಳು ಮತ್ತು ಕೆರೆಗಳ ಜಾಲದಲ್ಲಿ ಸ್ವತಃ ನಾವೆಗಳನ್ನು ಚಲಾಯಿಸಿಕೊಂಡು ಮೋಜು ಮಾಡಬಹುದಾದ ಅವಕಾಶ ಸಹ ಇಲ್ಲಿ ಲಭ್ಯವಿದೆ. ಈ ದೋಣಿ ಮನೆಗಳು  ಸುಸಜ್ಜಿತವಾಗಿ ವ್ಯವಸ್ಥೆಗೊಂಡಿದ್ದು, ಕೌಟುಂಬಿಕ ವಿಹಾರಕ್ಕೆ, ನವವಿವಾಹಿತರ ಮಧುಚಂದ್ರಕ್ಕೆ, ಸಾಹಸಿ ಯುವಕರಿಗೆ ಮತ್ತು ಕಾರ್ಪೋರೇಟ್ ಅಧಿವೇಶನಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಹಲವಾರು ಖಾಸಗಿ ಏಜೆನ್ಸಿಗಳು ಇಲ್ಲಿನ ಹಿನ್ನೀರಿನಲ್ಲಿ ವಿಹರಿಸುವ ದೋಣಿ ಮನೆಗಳಲ್ಲಿ ಪೂರ್ತಿ ದಿನ, ಸಂಪೂರ್ಣ ರಾತ್ರಿ ಮತ್ತು ಗಂಟೆಗಳ ಲೆಕ್ಕಾಚಾರದಲ್ಲಿ ವಿಹರಿಸುವ ಪ್ಯಾಕೇಜುಗಳನ್ನು ಒದಗಿಸುತ್ತವೆ. ಪ್ರವಾಸಿಗರು ಈ ದೋಣಿ ಮನೆಗಳಲ್ಲಿ ವಿಶ್ರಾಂತಿ ಕೋಣೆ, ಮಲಗುವ ಕೋಣೆ, ಅಡುಗೆ ಮನೆ, ಉಪ್ಪರಿಗೆ, ಮನೋರಂಜನೆಯ ಅಂಶಗಳು ಮತ್ತು ಆಹಾರ ಮುಂತಾದ ಸವಲತ್ತುಗಳನ್ನು ಪಡೆಯಬಹುದು. ಪ್ರವಾಸಿಗರಿಗೆ ಸೇವೆ ಮಾಡಲು ಮತ್ತು ಮಾರ್ಗದರ್ಶನ ನೀಡಲು ಇವುಗಳಲ್ಲಿ ತರಬೇತಿ ಹೊಂದಿದ ಸಿಬ್ಬಂದಿಗಳು ಇರುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue