Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ಬೇ ಐಲ್ಯಾಂಡ್ ಡ್ರಿಫ್ಟ್ ವುಡ್ ವಸ್ತುಸಂಗ್ರಹಾಲಯ

ಬೇ ಐಲ್ಯಾಂಡ್ ಡ್ರಿಫ್ಟ್ ವುಡ್ ವಸ್ತುಸಂಗ್ರಹಾಲಯ, ಕುಮರಕೊಮ್

1

ಬೇ ಐಲ್ಯಾಂಡ್ ಡ್ರಿಫ್ಟ್ ವುಡ್ ವಸ್ತುಸಂಗ್ರಹಾಲಯವು ಭಾರತದಲ್ಲಿ ತನ್ನ ಪ್ರಕಾರದ ಏಕೈಕ ವಸ್ತುಸಂಗ್ರಹಾಲಯವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದರ ವಿಶೇಷವೇನೆಂದರೆ ಇಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಬಂದ ಮರಗಳನ್ನು ಸಂಗ್ರಹಿಸಿ, ಅವುಗಳಿಗೆ ಕಲಾತ್ಮಕ ಸ್ಪರ್ಷವನ್ನು ನೀಡಲಾಗಿದೆ. ಇದು ಪ್ರಕೃತಿ ಮತ್ತು ಮಾನವನ ಸೃಜನಶೀಲತೆ ಸಮ್ಮಿಲನಗೊಳ್ಳುವ ಸ್ಥಳವೆಂದರೆ ತಪ್ಪಾಗಲಾರದು.

ಇಲ್ಲಿರುವ ಸಂಗ್ರಹಗಳಲ್ಲಿ ಅತ್ಯಂತ ಮನಸೆಳೆಯುವ ಸಂಗತಿ ಎಂದರೆ ಮರದ ಬೇರುಗಳಿಂದ ನಿರ್ಮಿಸಲಾಗಿರುವ ಶಿಲ್ಪಗಳು. ಇಲ್ಲಿರುವ ಕಲಾತ್ಮಕ ವಸ್ತುಗಳನ್ನು ಇಲ್ಲಿನ ಸಿಬ್ಬಂದಿಗಳು ಸಮುದ್ರದಲ್ಲಿ ಕೊಚ್ಚಿಕೊಂಡು ಬಂದ ವಸ್ತುಗಳನ್ನು ಸಂಗ್ರಹಿಸಿ, ಬಣ್ಣ ಬಳಿದು ಮತ್ತು ಅಲ್ಪ ಸ್ವಲ್ಪ ತಿದ್ದಿ ತೀಡಿ ನಿರ್ಮಿಸಿದ್ದಾರೆ. ಈ ಅನುಪಮ ವಸ್ತು ಸಂಗ್ರಹಾಲಯ ಸ್ಥಾಪನೆಯ ಹಿಂದಿನ ಕರ್ತೃ ಶ್ರೀಮತಿ, ರಾಜಿ ಪುನ್ನೂಸ್ ರವರು. ಪ್ರಸ್ತುತ ಅವರು ಈ ವಸ್ತು ಸಂಗ್ರಹಾಲಯದ ಮೇಲ್ವಿಚಾರಕರಾಗಿ (ಕ್ಯೂರೇಟರ್) ಕಾರ್ಯನಿರ್ವಹಿಸುತ್ತಿದ್ದಾರೆ.  ಈ ವಸ್ತು ಸಂಗ್ರಹಾಲಯವು ತನ್ನ ಅನುಪಮವಾದ ಕಲಾತ್ಮಕ ಮೌಲ್ಯದಿಂದಾಗಿ ಕೇರಳ ಸರ್ಕಾರ ನೀಡುವ ಅತ್ಯಂತ ನವೀನ ಪ್ರವಾಸೋದ್ಯಮ ಯೋಜನೆ ಪ್ರಶಸ್ತಿ ( 2004)ಯನ್ನು ತನ್ನದಾಗಿಸಿಕೊಂಡಿತು. ಬೇ ಐಲ್ಯಾಂಡ್ ಡ್ರಿಫ್ಟ್ ವುಡ್ ವಸ್ತುಸಂಗ್ರಹಾಲಯವು 2001ರಲ್ಲಿ ಪ್ರಾರಂಭಗೊಂಡಿತು. ಅಷ್ಟೇ ಅಲ್ಲದೆ ಈ ವಸ್ತು ಸಂಗ್ರಹಾಲಯವು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಈ ಸಂಗ್ರಹಾಲಯದಲ್ಲಿರುವ ವಸ್ತುಗಳು ಕಲಾಸಕ್ತರಿಗು ಮತ್ತು ಸಾಮಾನ್ಯರಿಗು ಅಚ್ಚರಿ ತರುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 1.30 ರಿಂದ ಸಂಜೆ 6 ರವರೆಗೆ ಪ್ರವೇಶಾವಕಾಶವಿದೆ.(ವಾರದ ದಿನಗಳಲ್ಲಿ)ಬೆಳಗ್ಗೆ 11.30 ರಿಂದ ಸಂಜೆ 6 ರವರೆಗೆ ( ಭಾನುವಾರ)ರಜಾದಿನ : ಸೋಮವಾರ

One Way
Return
From (Departure City)
To (Destination City)
Depart On
11 Jun,Thu
Return On
12 Jun,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jun,Thu
Check Out
12 Jun,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jun,Thu
Return On
12 Jun,Fri