Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ವೆಂಬನಾಡ್ ಸರೋವರ

ವೆಂಬನಾಡ್ ಸರೋವರ, ಕುಮರಕೊಮ್

9

ವೆಂಬನಾಡ್ ಸರೋವರವು ಅಥವಾ ವೆಂಬನಾಡ್ ಕಾಯಲ್ ಎಂಬುದು ಒಂದು ಸುಂದರವಾದ ನಿಷ್ಕಲ್ಮಷವಾದ ಸರೋವರವಾಗಿದ್ದು, ಒಂದು ದ್ವೀಪ ಸಮೂಹವನ್ನು ಒಳಗೊಂಡಿದೆ. ಅದರಲ್ಲಿ ಕುಮರಕೊಮ್ ಸಹ ಒಂದು. ಇದರ ಸುಂದರ ಜಲಸಾಗರವನ್ನು ಮತ್ತು ದ್ವೀಪಕಲ್ಪಗಳನ್ನು ನೋಡುವ ಸಲುವಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ಸರೋವರವು ಕೇರಳದ ದೊಡ್ಡ ಸರೋವರ ಎಂಬ ಖ್ಯಾತಿಗೆ ಹಾಗು ದೇಶದ ಅತಿ ಉದ್ದವಾದ ಸರೋವರ ಎಂಬ ಅಭಿದಾನಕ್ಕೆ ಪಾತ್ರವಾಗಿದೆ.  ಈ ಸರೋವರ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿದೆಯೆಂದು ಹೇಳಿದರೆ ಸಾಕು. ಅದು ಎಷ್ಟು ಉದ್ದವಾಗಿದೆಯೆಂದು ಅರ್ಥವಾಗುತ್ತದೆ! ಇದನ್ನು ಪುನ್ನಮಡ ಕಾಯಲ್ ಮತ್ತು ಕೊಚ್ಚಿ ಸರೋವರ ಎಂದು ಸಹ ಕರೆಯುತ್ತಾರೆ.

ಈ ಸರೋವರವು ಇಲ್ಲಿ ಓಣಂ ಸಮಯದಲ್ಲಿ ನಡೆಯುವ ವಾರ್ಷಿಕ ದೋಣಿ ಓಟದ ಸ್ಪರ್ಧೆಗಾಗಿ  ( ನೆಹರು ಟ್ರೋಫಿ ದೋಣಿ ಓಟ) ವಿಶ್ವಖ್ಯಾತಿಯನ್ನು ಪಡೆದಿದೆ. ಕೇರಳದ ಇತರ ಪ್ರಾಂತ್ಯಗಳಿಂದ ಹಲವಾರು ದೋಣಿಗಳು ಈ ಐತಿಹಾಸಿಕ ದೋಣಿ ಓಟದಲ್ಲಿ ಪಾಲ್ಗೊಂಡು ನೋಡುಗರಿಗೆ ರಸದೌತಣವನ್ನು ಒದಗಿಸುತ್ತವೆ.

ವೆಂಬನಾಡ್ ಸರೋವರವು ಕೇರಳ ಹಿನ್ನೀರು ಪ್ರವಾಸೋದ್ಯಮದ ಬೆನ್ನೆಲುಬಾಗಿದ್ದು, ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ನೂರಾರು ದೋಣಿಮನೆಗಳು ಈ ಸರೋವರದಲ್ಲಿ ವಿಹರಿಸುತ್ತ ನಿಮ್ಮ ಕಣ್ಣುಗಳಿಗೆ ಒಂದು ದೃಶ್ಯ ವೈಭ ವವನ್ನೊದಗಿಸುತ್ತವೆ. ಈ ಸರೋವರದ ಪೂರ್ವಭಾಗವು ಕುಮರಕೊಮ್ ಪಕ್ಷಿಧಾಮವನ್ನು ಒಳಗೊಂಡಿದ್ದು, ಹಲವಾರು ವಲಸೆಹಕ್ಕಿಗಳಿಗೆ ಆಶ್ರವನ್ನೊದಗಿಸಿದೆ. ಇದು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat