Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಆಕರ್ಷಣೆಗಳು » ಸುಜನ್‍ಪುರ್ ಕೋಟೆ

ಸುಜನ್‍ಪುರ್ ಕೋಟೆ, ಕುಲ್ಲು

1

ಸುಜನ್‍ಪುರ್ ಕೋಟೆಯನ್ನು ಕಂಗ್ರಾದ ರಾಜ ಅಭಯ ಚಂದ್ ಸುಮಾರು 1758 ರಲ್ಲಿ ನಿರ್ಮಿಸಿದರಂತೆ. ಇದು ಸುಜನ್‍ಪುರ್ ನಲ್ಲಿರುವ ಹಮೀರ್ ಪುರದಲ್ಲಿರುವ ಅತ್ಯಂತ ಸುಂದರ ಕಟ್ಟಡವಾಗಿದೆ. ಈ ಕೋಟೆಯು ತನ್ನಲ್ಲಿರುವ ವರ್ಣಚಿತ್ರಗಳಿಗೆ ಖ್ಯಾತಿ ಪಡೆದಿದೆ. 19 ನೇ ಶತಮಾನದಲ್ಲಿ ಪಹರಿ ಮಿನಿಯೇಚರ್ ವರ್ಣಚಿತ್ರಕಲೆಯ ಅನುಯಾಯಿಯಾಗಿದ್ದ ಕಂಗ್ರಾದ ರಾಜ ಸನ್ಸಾರ್ ಚಂದ್ ಇಲ್ಲಿ ವಾಸಿಸುತ್ತಿದ್ದನು. ಯಾವಾಗ ಬ್ರಿಟೀಷರು ಕಂಗ್ರಾದ ರಾಜನನ್ನು ಸೋಲಿಸಿ, ಕಂಗ್ರಾವನ್ನು ತಮ್ಮ ವಶಕ್ಕೆ ಪಡೆದರೊ, ಆಗ ಈ ಕೋಟೆಯು ಕಂಗ್ರಾದ ರಾಜ ಮತ್ತು ಅವನ ಕುಟುಂಬಸ್ಥರಿಗೆ ಆಶ್ರಯವನ್ನು ಒದಗಿಸಿತು.

ಈ ಕೋಟೆಯಲ್ಲಿ 12 ಕೊಠಡಿಗಳು ಮತ್ತು ಒಂದು ಹಜಾರ ಸಹ ಇದೆ. ಈ ಕೊಠಡಿಗಳನ್ನು ಕಂಗ್ರಾದ ಸನ್ಸಾರ್ ಚಂದ್ ರಾಜನನ್ನು ಭೇಟಿಯಾಗಲು ಬರುತ್ತಿದ್ದ ಅತಿಥಿಗಳಿಗಾಗಿ ನಿರ್ಮಿಸಲಾಗಿತ್ತು. ಬಿಯಾಸ್ ನದಿಯ ದಂಡೆಯ ಮೇಲೆ ನಿರ್ಮಾಣಗೊಂಡಿರುವ ಈ ಕೋಟೆಯಲ್ಲಿ ಒಂದು ಬರಹ್ದಾರಿ ಭವನ ಸಹ ಇದೆ. ಇಲ್ಲಿ ನ್ಯಾಯ ಪಂಚಾಯಿತಿಗಳು ನಡೆಯುತ್ತಿದ್ದವು ಎಂದು ಹೇಳಲಾಗುತ್ತದೆ. ಕೋಟೆಯು ವಿಶಾಲವಾದ ಪ್ರಾಂಗಣವನ್ನು ಹೊಂದಿದೆ. ಪ್ರಸ್ತುತ ಇದನ್ನು ಹೋಳಿ ಆಚರಣೆಗಾಗಿ ಬಳಸಲಾಗುತ್ತಿದೆ. ಇದು ಇಲ್ಲಿನ ಪ್ರಸಿದ್ಧ ಆಚರಣೆಗಳಲ್ಲಿ ಒಂದಾಗಿದ್ದು, 3-4 ದಿನಗಳ ಕಾಲ ಆಚರಿಸಲ್ಪಡುತ್ತದೆ.

ನರ್ಬದೇಶ್ವರ್, ಗೌರಿಶಂಕರ್ ಮತ್ತು ಮುರಳಿ ಮನೋಹರ್ ದೇವಾಲಯಗಳು ಇಲ್ಲಿರುವ ಇನ್ನಿತರ ಪ್ರಸಿದ್ಧ ಧಾರ್ಮಿಕ ಸ್ಥಳಗಳಾಗಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed