Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಹವಾಮಾನ

ಕುಲ್ಲು ಹವಾಮಾನ

ಮಾರ್ಚ್ ನಿಂದ ಅಕ್ಟೋಬರ್ ತಿಂಗಳುಗಳ ನಡುವಿನ ಅವಧಿಯು ಈ ಗಿರಿಧಾಮಕ್ಕೆ ಭೇಟಿಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ. ಮಾರ್ಚ್ ನಿಂದ ಜೂನ್‍ವರೆಗಿನ ಸಮಯವು ಇಲ್ಲಿ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೇಳಿ ಮಾಡಿಸಿದ ಸಮಯವಾಗಿದೆ. ಸಾಹಸ ಪ್ರಿಯರಿಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು ಚಾರಣಕ್ಕೆ ಪ್ರಶಸ್ತವಾದ ಸಮಯವಾಗಿದೆ. ನವೆಂಬರ್ ನಿಂದ ಫೆಬ್ರವರಿ ತಿಂಗಳುಗಳ ನಡುವಿನ ಸಮಯವು ಇಡೀ ಪ್ರಾಂತ್ಯವು ಹಿಮದಲ್ಲಿ ಮುಚ್ಚಲ್ಪಟ್ಟಿರುತ್ತದೆ. ಹಾಗಾಗಿ ಹಿಮ ಸ್ಕಿಯಿಂಗ್‍ಗೆ ಅನುಕೂಲಕರವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್) : ಕುಲ್ಲುವಿನ ಹವಾಮಾನವು ಬೇಸಿಗೆಯಲ್ಲಿ ಹಿತವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಗರಿಷ್ಠ ಉಷ್ಣಾಂಶವು 25° ಸೆಲ್ಶಿಯಸ್‍ನ್ನು ದಾಟುವುದಿಲ್ಲ. ಹಾಗಾಗಿ ಪ್ರವಾಸಿಗರು ಬಿಸಿಲಿನಿಂದ ವಿಶ್ರಾಂತಿ ಪಡೆಯಲು ಇಲ್ಲಿಗೆ ಭಾರೀ ಸಂಖ್ಯೆಯಲ್ಲಿ ಈ ಗಿರಿಧಾಮಕ್ಕೆ ಆಗಮಿಸುತ್ತಿರುತ್ತಾರೆ.

ಮಳೆಗಾಲ

(ಜುಲೈನಿಂದ ಆಗಸ್ಟ್) : ಕುಲ್ಲು ಪ್ರಾಂತ್ಯವು ಅನಿಯಮಿತವಾಗಿ ಭಾರೀ ಮಳೆಯನ್ನು ಪಡೆಯುತ್ತದೆ. ಮಳೆಗಾಲದಲ್ಲಿ ಇಲ್ಲಿನ ಉಷ್ಣಾಂಶವು 15° ಸೆಲ್ಶಿಯಸ್‍ನಿಂದ 25° ಸೆಲ್ಶಿಯಸ್ ಒಳಗಡೆಯೆ ಇರುತ್ತದೆ. ಈ ಅವಧಿಯಲ್ಲಿ ಕುಲ್ಲು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ) : ಕುಲ್ಲುವಿನ ಹವಾಮಾನವು ಚಳಿಗಾಲದಲ್ಲಿ ಚಳಿಯಿಂದ ನಡುಗಿಸುತ್ತದೆ. ಈ ಸಮಯದಲ್ಲಿ ಇಲ್ಲಿನ ಹವಾಮಾನವು 0° ಸೆಲ್ಶಿಯಸ್‍ಗೆ ಕುಸಿಯುತ್ತದೆ. ಅಲ್ಲದೆ ಕುಲ್ಲುವಿನಲ್ಲಿ ಚಳಿಗಾಲದಲ್ಲಿ ಭಾರೀ ಹಿಮಪಾತ ಬೇರೆ ಆಗುತ್ತದೆ.