Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಆಕರ್ಷಣೆಗಳು » ಸುಲ್ತಾನ್‍ಪುರ್ ಅರಮನೆ

ಸುಲ್ತಾನ್‍ಪುರ್ ಅರಮನೆ, ಕುಲ್ಲು

1

ಸುಲ್ತಾನ್‍ಪುರ್ ಅರಮನೆಯು ರುಪಿ ಅರಮನೆಯೆಂದೆ ಖ್ಯಾತಿಗಳಿಸಿದೆ. ಇದು ಕುಲ್ಲುವಿನಲ್ಲಿರುವ ಅತ್ಯದ್ಭುತವಾದ ಅರಮನೆಯಾಗಿದೆ. ಇದರ ಮೂಲ ರಚನೆಯು 1905 ರಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ ನಾಶವಾಯಿತು. ಆನಂತರ ಇದನ್ನು ಮೂಲ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಇಲ್ಲಿ ಹಲವಾರು ಮಿನಿಯೇಚರ್ ವರ್ಣಚಿತ್ರಗಳನ್ನು ಕುಲ್ಲು ಶೈಲಿಯಲ್ಲಿ ರಚಿಸಿ ಇಡಲಾಗಿದೆ. ಈ ಅರಮನೆಯು ತನ್ನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ವಾಸ್ತುಶಿಲ್ಪವು ಪಹರಿ ಶೈಲಿಯ ಸಂಯೋಜನೆಯನ್ನು ಹೊಂದಿದೆ. ಇದು ಹಿಮಾಲಯದ ಅಪರಿಮಿತ ಬುಡಕಟ್ಟು ಜನರ ಮತ್ತು ಬ್ರಿಟೀಷ್ ವಸಾಹತು ಶಾಹಿಯ ಸಮ್ಮಿಶ್ರ ಶೈಲಿಯನ್ನು ಹೊಂದಿದೆ. ಈ ಅರಮನೆಯ ಪ್ರವೇಶದ್ವಾರದ ನಿರ್ಮಾಣಕ್ಕೆ ಬೃಹದಾಕರಾವಾದ ಮರದ ದಿಮ್ಮಿಗಳನ್ನು ಬಳಸಲಾಗಿದೆ.

ಈ ಅರಮನೆಯು ಪ್ರಸ್ತುತ ರಾಜ ಮನೆತನದ ಕುಟುಂಬದವರ ವಶದಲ್ಲಿದೆ. ಹಾಗಾಗಿ ಈ ಅರಮನೆಗೆ ಪ್ರವೇಶಿಸುವ ಮುನ್ನ ಅವರ ಅನುಮತಿಯನ್ನು ಪಡೆಯಬೇಕಾದುದು ಅನಿವಾರ್ಯ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue