ಗೌರಿ ಶಂಕರ್ ದೇವಾಲಯವು ನಗ್ಗರ್ ನಲ್ಲಿ ನೆಲೆಗೊಂಡಿದ್ದು, ಇಲ್ಲಿನ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯವನ್ನು ಸುಮಾರು 11-12 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಪರಮಶಿವನಿಗಾಗಿ ನಿರ್ಮಿಸಲಾಗಿರುವ ಗೌರಿಶಂಕರ್ ದೇವಾಲಯವು ಗುಜರ-ಪ್ರತಿಹಾರ ಸಂಪ್ರದಾಯದಂತೆ ನಿರ್ಮಿಸಲಾಗಿರುವ ಕಟ್ಟ ಕಡೆಯ ಸ್ಮಾರಕವೆಂದು ನಂಬಲಾಗಿದೆ.
ಈ ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ಕಲ್ಲಿನ ಕೆತ್ತನೆಗಳು, ಗರ್ಭಗೃಹದ ಮುಂಭಾಗ. ಇವು ಗಣಪತಿಯ, ಹೂವಿನ, ಸಂಗೀತಗಾರರ ಮತ್ತು ನೃತ್ಯಗಾರರ ಕೆತ್ತನೆಗಳನ್ನು ಒಳಗೊಂಡಿದೆ. ಈ ದೇವಾಲಯವು ಒಂದು ಎತ್ತರವಾದ ವೇದಿಕೆಯ ಮೇಲೆ ಚೌಕಾಕಾರವಾದ ಪಿರಮಿಡ್ ಮಾದರಿಯ ರಚನೆಯನ್ನು ಮತ್ತು ತುದಿಯಲ್ಲಿ ಗುಮ್ಮಟಾಕಾರದ ರಚನೆಯನ್ನು ಹೊಂದಿದೆ.