Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ಆಕರ್ಷಣೆಗಳು » ಪೆರುವನ್ನಮುಳಿ ಆಣೆಕಟ್ಟು

ಪೆರುವನ್ನಮುಳಿ ಆಣೆಕಟ್ಟು, ಕ್ಯಾಲಿಕಟ್

3

ಪೆರುವನ್ನಮುಳಿ ಆಣೆಕಟ್ಟು ಬರುವುದು ಕ್ಯಾಲಿಕಟ್‌ನಿಂದ 60 ಕಿ.ಮೀ. ದೂರದಲ್ಲಿ. ಇದು ಆಕರ್ಷಕ ಆಣೆಕಟ್ಟು ತಾಣವಾಗಿದ್ದು, ಪೆರುವನ್ನಮುಳಿ ಎಂಬ ಸಣ್ಣ ಹಳ್ಳಿಯ ವ್ಯಾಪ್ತಿಗೆ ಬರುತ್ತದೆ. ಈ ಗ್ರಾಮದಿಂದ ಇಲ್ಲಿಗೆ ಉತ್ತಮ ಬಸ್‌ ಸೌಲಭ್ಯ ಇದೆ. ಬಸ್‌ ಮೂಲಕ ತೆರಳುವುದಾದರೆ ಕ್ಯಾಲಿಕಟ್‌ನಿಂದ ಇಲ್ಲಿಗೆ ತಲುಪಲು ಸುಮಾರು ಎರಡು ಗಂಟೆ ಕಾಲಾವಧಿ ಬೇಕು.

ಈ ಆಣೆಕಟ್ಟುವಿನ ಬಳಿ ಸಾಕಷ್ಟು ಆಕರ್ಷಣೆಗಳು ಇವೆ. ಆದ್ದರಿಂದಲೇ ನೂರಾರು ಪ್ರವಾಸಿಗರು ನಿತ್ಯ ಇಲ್ಲಿಗೆ ಬರುತ್ತಾರೆ. ಇಲ್ಲಿ ಒಂದು ಕೃತಕ ಕೆರೆ ಇದೆ. ಇಲ್ಲಿ ಪ್ರವಾಸಿಗರು ಬೋಟಿಂಗ್‌ ಮಜಾ ಅನುಭವಿಸಬಹುದು. ಸಮರಕಾ ತೊಟ್ಟಂ ಹೆಸರಿನಲ್ಲಿ ಇಲ್ಲೊಂದು ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ ಇದೆ. ಇಲ್ಲಿ ಕೂಡ ಪ್ರವಾಸಿಗರು ಒಂದಿಷ್ಟು ಸಮಯ ಕಳೆಯುತ್ತಾರೆ. ಮೊಸಳೆ ಫಾರಂ ಕೂಡ ಇಲ್ಲಿದೆ. ಜತೆಗೆ ಪಕ್ಷಿಧಾಮವೂ ಇದೆ. ಇವೆಲ್ಲವೂ ಉತ್ತಮ ವೀಕ್ಷಣಾ ತಾಣಗಳಾಗಿದ್ದು, ಆಣೆಕಟ್ಟಿನ ಅಕ್ಕಪಕ್ಕದಲ್ಲೇ ಕಾಣಬಹುದಾಗಿವೆ. ಪಕ್ಷಿಧಾಮವಂತೂ ವೀಕ್ಷಕರಿಗೆ ಉತ್ತಮ ಅನುಭವ ನೀಡುತ್ತದೆ. 90ಕ್ಕೂ ಹೆಚ್ಚು ತಳಿಯ ಪಕ್ಷಿಗಳು ಇಲ್ಲಿವೆ.

ಪೆರುವನ್ನಮುಳಿಯು ಮಲಬಾರ್‌ ವನ್ಯಜೀವಿ ತಾಣವೂ ಆಗಿದೆ. ಇಲ್ಲಿ ಪ್ರಾಣಿಗಳು ಹಾಗೂ ಸಸ್ಯಗಳ ವ್ಯಾಪಕ ಭಂಡಾರವೆ ಇದೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೈಸ್‌ ರಿಸರ್ಚ್ ಕೇಂದ್ರ ಇಲ್ಲಿದ್ದು, ಸಾಕಷ್ಟು ವಿಧದ ಗಿಡ ಮೂಲೆಗಳನ್ನು ಬೆಳೆದಿದೆ. ಈ ಆಣೆಕಟ್ಟಿಗೆ ಪ್ರತಿದಿನ ಸಂಜೆ 6 ರ ವರೆಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ. ಭಾನುವಾರ ಹಾಗೂ ಎಲ್ಲಾ ಸರಕಾರಿ ರಜಾದಿನಗಳಂದು ಇದಕ್ಕೂ ರಜೆ ಇರುತ್ತದೆ. ಬೇಸಿಗೆ ಹಾಗೂ ವಿಪರೀತ ಮಳೆ ಬೀಳುವ ಸಂದರ್ಭದಲ್ಲಿ ಇತ್ತ ಬರದಿರುವುದು ಉತ್ತಮ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed