ಕ್ಯಾಲಿಕಟ್ ಕಡಲ ತೀರಕ್ಕೆ ಅತ್ಯಂತ ಸಮೀಪದಲ್ಲಿದೆ ಲಯನ್ಸ್ ಪಾರ್ಕ್. ಇದು ಎಲ್ಲರಿಗೂ ಇಷ್ಟವಾಗುವ ತಾಣ. ಮಕ್ಕಳಿಗಂತೂ ಸುಂದರ ಸಾಯಂಕಾಲ ಕಳೆಯಲು ಇದು ಪ್ರಶಸ್ತ ನೆಲೆ. ಇಲ್ಲೊಂದು ಅಮ್ಯೂಸ್‌ಮೆಂಟ್ ಪಾರ್ಕ್ ಇದೆ. ಇಲ್ಲಿ ಸಾಕಷ್ಟು ಆಕರ್ಷಕ ರೈಡ್‌ಗಳು, ಮನರಂಜನಾ ಆಟಗಳು ಇವೆ. ಕ್ಯಾಲಿಕಟ್‌ನ ಜನಪ್ರಿಯ ತಾಣವಾದ ಲೈಟ್ ಹೌಸ್ ಕೂಡ ಇಲ್ಲಿಂದ ಕೂಗಳತೆಯಷ್ಟು ದೂರದಲ್ಲಿದೆ.
ಸಾಯಂಕಾಲದ ಮುದ ಅನುಭವಿಸಲು ಇದು ಒಳ್ಳೆಯ ಉದ್ಯಾನ. ಕಡಲ ತೀರಕ್ಕೆ ಅತ್ಯಂತ ಸಮೀಪದಲ್ಲಿದೆ. ಪ್ರವಾಸಿಗರು ಇದರ ಜತೆ ಸೂರ್ಯಾಸ್ತದ ಸವಿಯನ್ನು ಕೂಡ ಅನುಭವಿಸಬಹುದು. ಈ ಪಾರ್ಕ್ ಗೆ ವರ್ಷದ ಎಲ್ಲಾ ದಿನ ಸಂಜೆ 3 ರ ನಂತರ ಪ್ರವೇಶ ಇರುತ್ತದೆ. ಈ ಭಾಗದಲ್ಲಿ ಸಾಕಷ್ಟು ಅಂಗಡಿಗಳು ಇದ್ದು, ಐಸ್ ಕ್ರೀಂ, ಪಾಪ್‌ಕಾರ್ನ್ ಮತ್ತಿತರವನ್ನು ಮಾರುತ್ತಿರುತ್ತವೆ. ಇಲ್ಲಿನ ಮಳಿಗೆಗಳಲ್ಲಿ ಕತ್ತರಿಸಿ ಉಪ್ಪು ಹಚ್ಚಿಟ್ಟ ಮಾವಿನ ಕಾಯಿ, ಗೂಸ್‌ಬೆರ್ರಿಗಳು ಸಿಗುತ್ತವೆ. ಪ್ರವಾಸಿಗರು ತಮ್ಮ ಯಾನವನ್ನು ಪಾರ್ಕ್ ಹಾಗೂ ಕಡಲ ತೀರ ಎರಡೂ ಕಡೆ ಇಚ್ಛಾನುಸಾರ ಕಳೆಯಬಹುದು.


Click it and Unblock the Notifications