ನೀಂದಕರಾ ಬಂದರು ಅತ್ಯಂತ ಪ್ರಮುಖ ಸಮುದ್ರ ತೀರದ ಬಂದರಾಗಿದೆ. ಅಲ್ಲದೇ ಮೀನುಗಾರಿಕೆಗೂ ಹೆಸರಾದ ತಾಣ. ಕೊಲ್ಲಂ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿದೆ.
ನೀಂದಕರಾ ಬಂದರು ಅತ್ಯಂತ ಪ್ರಮುಖ ಸಮುದ್ರ ತೀರದ ಬಂದರಾಗಿದೆ. ಅಲ್ಲದೇ ಮೀನುಗಾರಿಕೆಗೂ ಹೆಸರಾದ ತಾಣ. ಕೊಲ್ಲಂ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿದೆ. ಇಂಡೋ- ನಾವರ್ವಿಂಗೇನ್ ಫಿಶರೀಸ್ ಕಮ್ಯೂನಿಟಿ ಪ್ರಾಜೆಕ್ಟ್‌ನ ಕೇಂದ್ರ ಸ್ಥಳ ಇಲ್ಲಿದೆ. ಈ ತಾಣ ಪ್ರಮುಖವಾಗಿ ಮೀನುಗಾರಿಕೆ ಹಾಗೂ ಇತರೆ ಈ ಪ್ರದೇಶಕ್ಕೆ ಸಂಬಂಧಿತ ಚಟುವಟಿಕೆ ಕೇಂದ್ರವಾಗಿದೆ. ಈ ಯೋಜನೆಯು ಈ ಭಾಗದ ಪ್ರಗತಿಗೆ ಸಾಕಷ್ಟು ಪೂರಕ ಕೊಡುಗೆಯನ್ನು ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲೇ ಮೀನುಗಾರರಿಗೆ ಮೀನುಗಾರಿಕೆಯ ತರಬೇತಿಯನ್ನು ಕೂಡ ನೀಡಲಾಗುತ್ತಿದೆ. ಇದಲ್ಲದೇ ಸಕ್ತಿಕುಲಂಗಾರಾ ಬಳಿ ಬೋಟ್ ನಿರ್ಮಾಣ ಯಾರ್ಡ್ ಕೂಡ ಸ್ಥಾಪಿಸಿದ್ದು, ಇದರೊಂದಿಗೆ ಮೀನು ಸಂಸ್ಕರಣಾ ಘಟಕವನ್ನೂ ನಿರ್ಮಿಸಲಾಗಿದೆ.
ನೀಂದಕರಾ ಬಂದರು ಮೀನುಗಾರಿಕೆಗೆ ಸಂಬಂಧಿಸಿದ ಅತ್ಯಂತ ದೊಡ್ಡ ಬಂದರು ಎನಿಸಿಕೊಂಡಿದ್ದು ಏಕಕಾಲಕ್ಕೆ 500 ಬೋಟ್‌ಗಳನ್ನು ನಿಲ್ಲಿಸುವ ಸ್ಥಳಾವಕಾಶ ಹೊಂದಿದೆ. ಸುತ್ತಲಿನ ಸೌಂದರ್ಯ ಸವಿಯಲು ಈ ಬಂದರು ಪ್ರಶಸ್ತವಾಗಿದೆ. ಇದರ ಸೇತುವೆ ಮೇಲೆ ನಿಂತು ವೀಕ್ಷಿಸಿದರೆ ಅಷ್ಟಾಂಬುಧಿ ಕೆರೆ ಸಮುದ್ರದೊಂದಿಗೆ ಬೆರೆಯುವ ವಿಹಂಗಮ ನೋಟ ಸವಿಯಬಹುದು.


Click it and Unblock the Notifications