ಮುಂಬೈ ಹಿನ್ನೀರಿನಂತೆಯೇ ಕಂಗೊಳಿಸುವ ಕೊಚ್ಚಿಯ ಮರೈನ್ ಡ್ರೈವ್ ಇಲ್ಲಿನ ಪ್ರಮುಖ ಜಲಾಕರ್ಷಣೆಗಳಲ್ಲಿ ಒಂದು. ಮರೀನ್ ಡ್ರೈವ್ ನಲ್ಲಿ ವಾಯುವಿಹಾರ ನಡೆಸುವುದೇ ಒಂದು ಸೊಗಸು. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಸುಂದರವಾದ ವಾತಾವರಣ, ಹಿನ್ನೀರು ಮನಸಿಗೆ ಖುಷಿಕೊಡುತ್ತದೆ. ಭಾನುವಾರದ ರಜಾವೇಳೆಯನ್ನು ಕಳೆಯಲು ಇದು ಹೇಳಿ ಮಾಡಿಸದಂಥ ಸ್ಥಳ. ಇಲ್ಲಿನ ಸೂರ್ಯಾಸ್ತ ನೋಡುವುದೇ ಸಂಭ್ರಮ. ಇಲ್ಲಿನ ಇನ್ನಷ್ಟು ವಿಶೇಷಗಳೆಂದರೆ ಬೃಹತ್ ಮಾಲ್ಗಳು ವ್ಯಾಪಾರೀ ಮಳಿಗೆಗಳು. ದೇಶ ವಿದೇಶಗಳ ನಾನಾ ರೀತಿಯ ವಸ್ತುಗಳು ಇಲ್ಲಿ ಸಿಗುತ್ತವೆ. ಇಲ್ಲಿ ಶಾಪಿಂಗ್ ಮಾಡುವುದು ಕೂಡ ಮಧುರಾನುಭೂತಿನ್ನು ನೀಡುತ್ತದೆ. ಫಾಸ್ಟ್ ಫುಡ್ ಗಳು, ಬೇರೆ ಬೇರೆ ದೇಶಗಳ ಖಾದ್ಯಗಳು ದಾರಿಯುದ್ದಕ್ಕೂ ನಿಮ್ಮ ನಾಲಿಗೆಯಲ್ಲಿ ನೀರೂರಿಸುತ್ತವೆ. ಕಾಯೀಸ್ ಬಿರಿಯಾನಿ ಸೆಂಟರ್ ಸೇರಿದಂತೆ ಕೊಚ್ಚಿಯ ಬಹುತೇಕ ಉತ್ತಮ ಹೋಟೆಲ್ ಗಳು ಇಲ್ಲಿಯೇ ಇವೆ. ಇಲ್ಲಿಗೆ ಬಂದು ಮಟನ್, ಬಿರಿಯಾನಿಗಳನ್ನು ಸವಿಯದಿದ್ದರೆ ನೀವೇನೋ ಕಳಕೊಂಡಂತೆಯೇ ಸರಿ!


Click it and Unblock the Notifications