Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಜ್ಯೂ ಟೌನ್ - ಯಹೂದಿಗಳ ಕೇಂದ್ರ

ಜ್ಯೂ ಟೌನ್ - ಯಹೂದಿಗಳ ಕೇಂದ್ರ, ಕೊಚ್ಚಿ

2

ಒಂದಾನೊಂದು ಕಾಲದಲ್ಲಿ ಯಹೂದ್ಯರ ಕೇಂದ್ರ ಸ್ಥಳವಾಗಿದ್ದ ಜ್ಯೂ ಟೌನ್ ಇವತ್ತಿಗೂ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತದೆ. ಕೊಚ್ಚಿಗೆ ಭೇಟಿ ನೀಡಿದಾಗ ನೋಡಲೇಬೇಕಾದ ತಾಣಗಳ ಪಟ್ಟಿಯಲ್ಲಿ ಜ್ಯೂಟೌನ್ ಕೂಡ ಒಂದು. ಇಲ್ಲಿನ ಸಾಂಸ್ಕೃತಿಕ ಹಾಗೂ ವಾಸ್ತುಶಿಲ್ಪದ ಅನನ್ಯತೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಾರತದ ಇತರ ನಗರಗಳಿಗಿಂತ ಹಚ್ಚಿನ ಸಂಖ್ಯೆಯಲ್ಲಿ ಯಹೂದಿಗಳು ಇಲ್ಲಿ ನೆಲೆಸಿದ್ದಾರೆ. ಕ್ರಿ.ಪೂ 700 ಕ್ಕಿಂತಲೂ ಹಿಂದಿನಿಂದ ಯಹೂದಿಗಳು ಈ ಪ್ರದೇಶಕ್ಕೆ ಬಂದು ವ್ಯಾಪಾರ ವಹಿವಾಟನ್ನು ನಡೆಸುತ್ತಾ, ಇದನ್ನೇ ತಮ್ಮ ಖಾಯಂ ನೆಲೆಯನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ಯಹೂದಿಗಳ ಪ್ರತ್ಯೇಕ ಸಂಸ್ಕೃತಿಯನ್ನೂ ಗುರುತಿಸಬಹುದಾಗಿದೆ. ಯಹೂದಿಗಳ ಪ್ರಾಬಲ್ಯವನ್ನು ನೋಡಿ, ಈ ಪ್ರದೇಶದ ಆಗಿನ ಆಡಳಿತಗಾರ ಯಹೂದಿ ಟೌನ್  ಎಂದು ಹೆಸರಿಟ್ಟು ಈ ಪ್ರದೇಶವನ್ನು ಅವರಿಗೇ ನೀಡಿದನೆಂಬುದು ಇತಿಹಾಸದ ದಾಖಲೆಗಳಲ್ಲಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳೆಂದರೆ ಪರದೇಸಿ ಸಿನಗಾಗ್ ನ ಡಚ್ ಅರಮನೆ ಮತ್ತು ಪ್ರಾಚೀನ ಯಹೂದ್ಯರ ಸಿನಗಾಗ್. ಈ ಪಟ್ಟಣ ಬೀದಿಗಳಲ್ಲಿ ಸಣ್ಣ ಪುಟ್ಟ ಅಂಗಡಿಗಳ ಸಂಖ್ಯೆಯೇ ಹೆಚ್ಚಿದ್ದು, ಇಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಸಾಲೆ ಪದಾರ್ಥಗಳು ಮಾರಾಟವಾಗುತ್ತವೆ. ಈಗಲೋ... ಇನ್ನೊಂದು ಕ್ಷಣಕ್ಕೋ  ಬೀಳುವ ಹಾಗೆ ಕಾಣುವ ತುಂಬಾ ಹಳೆಯ ಕಟ್ಟಡಗಳು ಯಹೂದಿಗಳ ಗತಕಾಲವನ್ನು ಸಾರುತ್ತವೆ.

ಇಲ್ಲಿ ಸಿಗುವ ಭವ್ಯವಾದ ಆಭರಣಗಳು, ಪುರಾತನ ಕಲಾಕೃತಿಗಳು ನಿಮ್ಮನ್ನು ಉಲ್ಲಸಿತಗೊಳಿಸುತ್ತವೆ. ಈ ಪ್ರದೇಶದ ಥಳಕು ಬಳಕಿನ ವ್ಯಾಪಾರಿ ಮಳಿಗೆಗಳು ನಿಮ್ಮನ್ನು ಸೆಳೆಯುತ್ತವೆ. ಇದು ಶಾಪಿಂಗ್ ಪ್ರಿಯರಿಗೆ ಸೂಕ್ತವಾದ ತಾಣ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue