ಪೆಟುವ-ಗೊಸನಿ ಥಾನ್ ಎಂಬುದು ಈ ಪ್ರಾಂತ್ಯದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯರು ಕಾಳಿಯನ್ನು ಆರಾಧಿಸುತ್ತಾರೆ. ಜೊತೆಗೆ ಇದು ಕಾಳಿಯನ್ನು ಆರಾಧಿಸುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯರು ಕಾಳಿಯನ್ನು ಕೆಸೈಖೈಟಿಯೆಂಬ ಹೆಸರಿನಲ್ಲಿ ಪೂಜಿಸುತ್ತಾರೆ.
ಲಕ್ಷ್ಮೀಪುರಕ್ಕೆ ಬ್ರಿಟೀಷರು ಬಂದುದರ ಹಿಂದೆ ಮತ್ತು ಅವರು ಈ ದೇವಾಲಯವನ್ನು ಕಂಡು ಹಿಡಿದುದರ ಹಿಂದೆ ಒಂದು ಕುತೂಹಲಕರವಾದ ಕತೆಯಿದೆ. ಆ ಕಾಲದಲ್ಲಿ ಬ್ರಿಟೀಷರಿಗೆ ಲಕ್ಷ್ಮೀಪುರ್ ಪ್ರಾಂತ್ಯವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಸ್ವಲ್ಪ ಕಾಲ ಹಿಡಿಯಿತಂತೆ. ಅವರು ತಮ್ಮ ಆಡಳಿತವನ್ನು ಈ ಪ್ರಾಂತ್ಯದಲ್ಲಿ ವಿಸ್ತರಿಸುವಾಗ ಈ ದೇವಾಲಯವನ್ನು ಕಂಡು ಹಿಡಿದರಂತೆ. ಪ್ರಸ್ತುತ ಅರುಣಾಚಲ್ ಪ್ರದೇಶದಲ್ಲಿ ನೆಲೆಸಿರುವ ಡಫಲ ಜನರು ಹಿಂದೆ ಇಲ್ಲಿಗೆ ಯಾತ್ರೆಗಾಗಿ ಬಂದು ಹೋಗುತ್ತಿದ್ದರಂತೆ.
ಪೆಟುವ- ಗೊಸಾನಿ ಥಾನ್ ಇಂದಿಗು ಕಾಳಿ ದೇವಿಯ ಅತ್ಯಂತ ಪ್ರಸಿದ್ಧ ದೇವಾಲಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷ ಇಲ್ಲಿನ ಭಕ್ತಾಧಿಗಳು ದುರ್ಗಾ ಪೂಜೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಇದು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಿಂದ ತುಂಬಾ ದೂರವೇನಿಲ್ಲ.


Click it and Unblock the Notifications