Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು » ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ, ಕಾಜಿರಂಗಾ

3

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ ಘೇಂಡಾಮೃಗಗಳ ಆಶ್ರಯ ತಾಣವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ 2006 ರಲ್ಲಿ ಇದು ಹುಲಿ ಸಂರಕ್ಷಿತ ವನ್ಯಧಾಮವೆಂದು ಸಹ ಘೋಷಿಸಲ್ಪಟ್ಟಿತು. ಇದು ಪ್ರಪಂಚದಲ್ಲೇ ಹೆಚ್ಚಿನ ಪ್ರಮಾಣದ ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರಾಷ್ಟ್ರೀಯ ಉದ್ಯಾನವನವು ಯುನೆಸ್ಕೋದ ವಿಶ್ವಪಾರಂಪರಿಕ ತಾಣದ ಪಟ್ಟಿಗೆ ಸಹ ಸೇರಲ್ಪಟ್ಟಿದೆ. ಸುಮಾರು 429.93 ಚ.ಕಿ.ಮೀ ವ್ಯಾಪ್ತಿಯಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಗೋಲಘಾಟ್ ಮತ್ತು ನೊವಗಾಂವ್ ಜಿಲ್ಲೆಗಳಲ್ಲಿ ವ್ಯಾಪಿಸಿದೆ.

ಕಾಜಿರಂಗಾದಲ್ಲಿ ಪ್ರವಾಸ ಕೈಗೊಂಡಾಗ ನೀವು ಕೇವಲ ಘೇಂಡಾಮೃಗ ಮತ್ತು ಹುಲಿಗಳನ್ನು ಮಾತ್ರವಲ್ಲದೆ, ಏಶಿಯಾಟಿಕ್ ಆನೆಗಳು, ಏಶಿಯಾಟಿಕ್ ನೀರು ಎಮ್ಮೆಗಳು ಮತ್ತು ಜೌಗು ಪ್ರದೇಶದಲ್ಲಿ ಕಂಡು ಬರುವ ಜಿಂಕೆಗಳನ್ನು ಇಲ್ಲಿ ಬಹುಸಂಖ್ಯೆಯಲ್ಲಿ ನೋಡಬಹುದು. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ವಿಪುಲವಾದ ಪಕ್ಷಿ ಸಂಪತ್ತಿಗೆ ಸಹ ಹೆಸರುವಾಸಿಯಾಗಿದೆ. ಇಲ್ಲಿಗೆ ವಿದೇಶಿ ವಲಸೆ ಹಕ್ಕಿಗಳು ಮತ್ತು ದೇಶಿ ಹಕ್ಕಿಗಳು ಸ್ವಚ್ಛಂಧವಾಗಿ ಹಾರಾಡುವುದನ್ನು ನಾವು ಇಲ್ಲಿ ನೋಡಬಹುದು.

ಉದ್ಯಾನವನದ ಒಳಗಿನ ಆನೆ ಸಫಾರಿ - ಕಾಜಿರಂಗಾದಲ್ಲಿನ ಪ್ರವಾಸದ ಪ್ರಮುಖ ಆಕರ್ಷಣೆ

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಆನೆ ಸಫಾರಿ. ತರಬೇತಿ ಹೊಂದಿದ ಮಾವುತರ ಜೊತೆಯಲ್ಲಿ ಆನೆಯ ಮೇಲೆ ಕುಳಿತು, ವಿಶಾಲವಾದ ಬಯಲು ಪ್ರದೇಶಗಳಲ್ಲಿ ಭವ್ಯವಾದ ಪ್ರಾಣಿಗಳನ್ನು ನೋಡುತ್ತ ಸುತ್ತಾಡುವ ಅನುಭವವು, ಇದನ್ನು ನಿಮ್ಮ ಜೀವನದ ಅವಿಸ್ಮರಣೀಯ ಘಟನೆಗಳಲ್ಲಿ ಒಂದನ್ನಾಗಿಸುತ್ತದೆ.

ಇದನ್ನು ಹೊರತುಪಡಿಸಿ ಈ ರಾಷ್ಟ್ರೀಯ ಉದ್ಯಾನವನವನ್ನು ನೋಡಲು ಜೀಪ್ ಅಥವಾ 4WD ವಾಹನಗಳನ್ನು ಸಹ ಬುಕ್ ಮಾಡಿಕೊಂಡು ಹೋಗಬಹುದು. ಈ ವಾಹನಗಳನ್ನು ಈ ಉದ್ಯಾನವನದಲ್ಲಿರುವ ಆಡಳಿತ ಕೇಂದ್ರದಲ್ಲಿ ಮುಂಗಡವಾಗಿ ಬುಕ್ ಮಾಡುವುದು ಒಳಿತು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu