ಗೊಹ್‍ಪುರ್ ಎಂಬುದು ಅಸ್ಸಾಂ ರಾಜ್ಯದ ಸೊನಿಟ್‍ಪುರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಗೊಹ್‍ಪುರ್ ಒಂದು ಶ್ರೀಮಂತ ಐತಿಹಾಸಿಕ ಹಿನ್ನಲೆಯಿರುವ ಸ್ಥಳವಾಗಿದೆ. ಈ ಪಟ್ಟಣವು ಸ್ವಾತಂತ್ರ್ಯ ಹೋರಾಟಗಾರ ಕನಕ್‍ಲತಾ ಬರುವಾ ಅವರ ತವರೂರು. ಕನಕ್‍ಲತಾ ಬರುವಾ ಅವರು ಬಿರ್ ಬಲ ಎಂದೇ ಕರೆಯಲ್ಪಡುತ್ತಿದ್ದರು,ಈಕೆಯನ್ನು 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದದ್ದಕ್ಕಾಗಿ ಗುಂಡಿಟ್ಟು ಕೊಲ್ಲಾಲಾಯಿತು.
ಗೊಹ್‍ಪುರ್ ಹಲವಾರು ಕುತೂಹಲ ಭರಿತ ಸ್ಥಳಗಳನ್ನು ಹೊಂದಿದೆ. ಅವುಗಳಲ್ಲಿ ದಂಡಿ ದೇವಾಲಯ್, ಗೊಹ್‍ಪುರ್ ಸಂರಕ್ಷಿತ ವನ್ಯಧಾಮ ಮತ್ತು ಬೊರ್ ಪುಖುರಿಗಳು ಪ್ರಸಿದ್ಧಿಯನ್ನು ಪಡೆದಿವೆ. ಗೊಹ್‍ಪುರ್ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಿಂದ ಕೇವಲ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.
ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದಾಗ ಪ್ರವಾಸಿಗರು ತಪ್ಪದೆ ಗೊಹ್‍ಪುರಕ್ಕೆ ಭೇಟಿ ನೀಡುವ ಯೋಜನೆಯನ್ನು ಹಾಕಿಕೊಳ್ಳುವುದು ಒಳಿತು. ಬೆಳಗ್ಗೆ ಗೊಹ್‍ಪುರಕ್ಕೆ ಭೇಟಿ ನೀಡಿ ಸಂಜೆಗೆ ಈ ಉದ್ಯಾನವನಕ್ಕೆ ಭೇಟಿ ನೀಡುವುದು ಒಳಿತು. ಗೊಹ್‍ಪುರದಿಂದ ಪ್ರವಾಸಿಗರು ಟ್ಯಾಕ್ಸಿಯಲ್ಲಿ ಕಾಜಿರಂಗಾಕ್ಕೆ ತಲುಪಬಹುದು. ಆದಷ್ಟು ಕಾರನ್ನು ಪೂರ್ತಿ ದಿನಕ್ಕೆ ಬಾಡಿಗೆ ಪಡೆಯುವುದು ಒಳ್ಳೆಯದು. ಏಕೆಂದರೆ ಪ್ರವಾಸಿಗರು ಯಾವುದೇ ತೊಂದರೆಯಿಲ್ಲದೆ ಸಂಜೆಗೆ ವಾಪಸ್ ಬರಬಹುದು.


Click it and Unblock the Notifications