ಪುಕ್ ಪೂಲ್ ಅನ್ನು ಮೊಘಲ್ ಸೇತುವೆ ಎಂದು ಸಹ ಕರೆಯುತ್ತಾರೆ. ಇದು ಕರ್ನಲ್‍ಗೆ ಏಳು ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಅಮೃತಶಿಲೆಯಿಂದ ನಿರ್ಮಿಸಲಾಗಿರುವ ಸಯದ್‍ರವರ ಸಮಾಧಿ ಬಳಿ ಇದು ನೆಲೆಗೊಂಡಿದೆ. ಪ್ರತಿ ಗುರುವಾರಗಳಂದು ಇಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವಾರು ಜನರು ಇಲ್ಲಿ ಸೇರುತ್ತಾರೆ.
ಇಲ್ಲಿನ ಸುತ್ತ- ಮುತ್ತಲ ಹಳ್ಳಿಗರು ತಮ್ಮ ಹರಕೆಯನ್ನು ನೆರವೇರಿಸುವಂತೆ ಕೋರಿ ಇಲ್ಲಿ ಕಾಣಿಕೆಗಳನ್ನು ಸಲ್ಲಿಸುತ್ತಾರೆ ಮತ್ತು ದೀಪಗಳನ್ನು ಹಚ್ಚುತ್ತಾರೆ. ಇಲ್ಲಿಗೆ ಬಂದು ಹರಕೆ ಸಲ್ಲಿಸಿದ ಕಾರಣಕ್ಕೆ ತಮ್ಮ ಕಾಯಿಲೆಗ್ಳನ್ನು ಗುಣಪಡಿಸಿಕೊಂಡವರು ಸಹ ಇಲ್ಲಿ ಪೂಜೆ ಸಲ್ಲಿಸಲು ಆಗಮಿಸುತ್ತಾರೆ. ಇದರ ಜೊತೆಗೆ ಐಶ್ವರ್ಯವನ್ನು ಪ್ರಸಾದಿಸುವಂತೆ ಕೋರಿ ಹಾಗು ಭೂತ ಚೇಷ್ಟೆಗಳಿಂದ ನಿವಾರಣೆಪಡೆಯುವ ಸಲುವಾಗಿ ಸಹ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.


Click it and Unblock the Notifications