ಕರ್ಣಕೆರೆಯೆಂಬುದು ಮಹಾಭಾರತದ ಪ್ರಸಿದ್ಧ ಪಾತ್ರವಾದ ಕರ್ಣನ ಹೆಸರನ್ನು ಪಡೆದಿದೆ. ಇದು ಕರ್ನಾಲ್ ನಗರದ ಹೃದಯ ಭಾಗದಿಂದ ಕೇವಲ 13-15 ನಿಮಿಷಗಳ ಅವಧಿಯಷ್ಟು ಪ್ರಯಾಣ ಮಾಡಿದರೆ ತಲುಪಬಹುದಾದಷ್ಟು ದೂರದಲ್ಲಿದೆ. ಈ ಕೆರೆ ಮತ್ತು ಇಲ್ಲಿನ ಸ್ಥಳ ಪುರಾಣವಾಗಿರುವ ಪಾತ್ರದಿಂದಾಗಿಯೇ ಈ ನಗರಕ್ಕೆ ಕರ್ನಾಲ್ ಎಂಬ ಹೆಸರು ಬಂದಿದೆ.
ಉಲ್ಲೇಖಗಳ ಪ್ರಕಾರ ಈ ಸುಪ್ರಸಿದ್ಧ ವೀರನು ಪ್ರತಿದಿನ ಕರ್ಣತಾಲ್ ಅಥವಾ ಕೊಳವೆಂದು ಇಂದು ಕರೆಯಲ್ಪಡುತ್ತಿರುವ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದನಂತೆ. ಇದೇ ಸ್ಥಳದಲ್ಲಿ ಕರ್ಣನು ತನ್ನ ಕವಚ ಕುಂಡಲಗಳನ್ನು ಅರ್ಜುನನ ತಂದೆಯಾದ ಇಂದ್ರನಿಗೆ ದಾನ ಮಾಡಿದನಂತೆ.
ಕರ್ಣ ಕೆರೆಯು ಕೇವಲ ಕರ್ನಾಲ್ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಇಡೀ ಹರಿಯಾಣದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಗ್ರ್ಯಾಂಡ್ ಟ್ರಂಕ್ ರಸ್ತೆಯ ಪಕ್ಕದಲ್ಲಿಯೇ ನೆಲೆಗೊಂಡಿರುವುದರಿಂದ ಸಹಜವಾಗಿ ಪ್ರವಾಸಿಗರಿಂದ ಆಕರ್ಷಿತಗೊಳ್ಳುತ್ತಿದೆ. ಹರಿಯಾಣದ ಪ್ರವಾಸೋದ್ಯಮ ಇಲಾಖೆಯು ಇಲ್ಲಿಗೆ ವಾಹನಗಳು ಪ್ರವೇಶಿಸುವಂತೆ ಒಂದು ಡ್ರೈವಿಂಗ್ ಪಾಸ್ ನಿರ್ಮಿಸಿದ್ದಾರೆ. ಹಾಗಾಗಿ ಇದು ಯಾವಾಗಲೂ ಪ್ರವಾಸಿಗರಿಂದ ತುಂಬಿರುತ್ತದೆ.
ಮೂರು ಪಥಗಳ ದಾರಿಯಿಂದ ಮತ್ತು ಅತ್ಯಂತ ರುಚಿ ಮತ್ತು ಶುಚಿಯನ್ನು ಹೊಂದಿರುವ ಉಪಾಹಾರ ಗೃಹಗಳಿಂದ ಹಾಗು ಸುಂದರವಾದ ಹುಲ್ಲು ಹಾಸುಗಳಿಂದ ಅಲಂಕರಿಸಲ್ಪಟ್ಟಿರುವ ಕರ್ಣ ಕೆರೆಯು ವಿಹಾರಕ್ಕೆ ಮತ್ತು ಪಾರ್ಟಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.


Click it and Unblock the Notifications